ಇಂಗ್ಲೆಂಡ್‌ ವಿರುದ್ಧ ರವೀಂದ್ರ ಜಡೇಜಾ ಭರ್ಜರಿ ಶತಕ! 400 ರನ್‌ ಗಡಿದಾಟಿದ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಅತಿಥೇಯ ಇಂಗ್ಲೆಂಡ್‌ ವಿರುದ್ಧ ಎಜ್‌ ಬಾಸ್ಟನ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 5ನೇ ಟೆಸ್ಟ್‌ ನಲ್ಲಿ ಭಾರತದ ಆಲ್‌ ರೌಂಡರ್‌ ರವೀಂದ್ರ ಜಡೇಜಾ ಭರ್ಜರಿ ಶತಕ ಸಿಡಿಸಿದ್ದಾರೆ.
ಭಾರತ 5 ವಿಕೆಟ್‌ ನಷ್ಟಕ್ಕೆ 98 ರನ್‌ ಗಳಿಸಿ ಸಂಕಷ್ಟದಲ್ಲಿದ್ದಾಗ ಕ್ರಿಸ್‌ ಗೆ ಇಳಿದಿದ್ದ ಜಡೇಜಾ, ವಿಕೆಟ್‌ ಕೀಪರ್‌ ಬ್ಯಾಟ್ಸ್ಮನ್‌  ಪಂತ್‌(146 ರನ್ ) ಜೊತೆಗೆ 222ರನ್‌ ಗಳ ಸೊಗಸಾದ ಜೊತೆಯಾಟವಾಡಿದ್ದರು. ಪಂದ್ಯದ ಮೊದಲ ದಿನ 83 ರನ್ ಗಳಿಸಿ ನಾಟೌಟ್‌ ಆಗಿ ಉಳಿದಿದ್ದ ಜಡೇಜಾ ಇಂದು ಬ್ಯಾಟಿಂಗ್‌ ಮುಂದುವರೆಸಿ ಭರ್ಜರಿ ಶತಕ ಸಿಡಿಸಿದ್ದಾರೆ. ಶತಕದ ಬಳಿಕ ಭರ್ಜರಿ ಹೊಡೆತಕ್ಕೆ ಮುಂದಾದ ಎಡಗೈ ದಾಂಡಿಗ 104 ರನ್‌ ಸಿಡಿಸಿ ಆಂಡರ್ಸನ್ ಎಸೆತದಲ್ಲಿ ಬೋಲ್ಡ್‌ ಆಗಿ ನಿರ್ಗಮಿಸಿದರು.  ಭಾರತವು ಮೊದಲ ಇನ್ನಿಂಗ್ಸ್‌ ನಲ್ಲಿ 9 ವಿಕೆಟ್‌ ನಷ್ಟಕ್ಕೆ 381 ರನ್‌ ಕಲೆಹಾಕಿದೆ. ಭೂಮ್ರಾ ( 18), ಸಿರಾಜ್‌ (1 ರನ್‌) ಕ್ರೀಸ್‌ ನಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!