ಹೊಸದಿಗಂತ ಡಿಜಿಟಲ್ ಡೆಸ್ಕ್
ಮಹಾರಾಷ್ಟ್ರದಲ್ಲಿ ಅಧಿಕಾರದ ಗದ್ದುಗೆಗೆಏರುವ ಮೂಲಕ ಮತ್ತೊಂದು ಯಶಸ್ಸು ಪಡೆದಿರುವ ಬಿಜೆಪಿ ಇದೀಗ ದಕ್ಷಿಣ ರಾಜ್ಯಗಳ ತನ್ನ ಚಿತ್ತ ಹರಿಸಿದ್ದು, ಅದಕ್ಕಾಗಿ ವೇದಿಕೆ ಸಜ್ಜಾಗಿದೆ.
ಇಂದಿನಿಂದ ಹೈದರಾಬಾದ್ನಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತಿದ್ದು, ಈ ಮೂಲಕ ದಕ್ಷಿಣ ರಾಜ್ಯಗಳ ಮೇಲೆ ಹೆಚ್ಚಿನ ಗಮನ ಹರಿಸಿದೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆ ಎದುರಿಸಲಿರುವ ತೆಲಂಗಾಣದ ಮೇಲೆ ಬಿಜೆಪಿ ಅತಿ ಹೆಚ್ಚು ಗಮನ ನೀಡುತ್ತಿದೆ.
ಹೈದರಾಬಾದ್ನಲ್ಲಿ ನಡೆಯುತ್ತಿರುವ 48 ಗಂಟೆಗಳ ಸಭೆಗಳಲ್ಲಿ ಭಾಗವಹಿಸಲು ನಿಗದಿಯಾಗಿರುವ 345ರಲ್ಲಿ 300 ಜನ ಮುಖಂಡರು ಈಗಾಗಲೇ ಹೈದರಾಬಾದಿಗೆ ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಆಗಮಿಸಲಿದ್ದಾರೆ. ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಈಗಾಗಲೇ ಹೈದರಾಬಾದಿಗೆ ಆಗಮಿಸಿದ್ದಾರೆ.