ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಲಂಕಾದಲ್ಲಿ ಅರಾಜಕತೆಯ ಭೀಕರತೆ ತಾಂಡವವಾಡುತ್ತಿದೆ. ಆಕ್ರೋಶಗೊಂಡ ಜನರು ಬೃಹತ್ ಸಂಖ್ಯೆಯಲ್ಲಿ ಶ್ರೀಲಂಕಾ ಅಧ್ಯಕ್ಷ ಗೋಟಬಾಯಾ ರಾಜಪಕ್ಸೆಯವರ ಮನೆಗೆ ಮುತ್ತಿಗೆ ಹಾಕಿದ್ದಾರೆ.
ಪ್ರತಿಭಟನಾಕಾರರು ಮನೆಯನ್ನು ಸುತ್ತುವರಿದು ಮುತ್ತಿಗೆ ಹಾಕಿದ್ದರಿಂದ ಗೋಟಬಾಯಾ ತಮ್ಮ ಅಧಿಕೃತ ನಿವಾಸದಿಂದ ಪಲಾಯನ ಮಾಡಿದ್ದಾರೆ ಎಂದು ಸುದ್ದಿ ಮೂಲಗಳು ವರದಿ ಮಾಡಿವೆ. ಶ್ರೀಲಂಕಾದ ರಾಜಧಾನಿ ಕೋಲಂಬೋದಲ್ಲಿರುವ ಗೋಟಬಾಯಾ ಅವರ ಅಧಿಕೃತ ನಿವಾಸಕ್ಕೆ ಸಾವಿರಾರು ಸಂಖ್ಯೆಯಲ್ಲಿ ಮುತ್ತಿಗೆ ಹಾಕುತ್ತಿರುವ ವಿಡಿಯೋಗಳು ಹೊರಬಿದ್ದಿವೆ. ಶನಿವಾರ ಪ್ರತಿಭಟನೆ ನಡೆಸುವ ಕುರಿತು ಮಾಹಿತಿ ಸಿಕ್ಕ ಬೆನ್ನಲ್ಲೇ ಗೋಟಬಾಯಾ ಅವರ ಸುರಕ್ಷತೆಯ ದೃಷ್ಟಿಯಿಂದ ಅವರನ್ನು ಶುಕ್ರವಾರವೇ ಮನೆಯಿಂದ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ಹೇಳಿದೆ.
ಮುತ್ತಿಗೆ ಹಾಕಿದ ಉದ್ರಿಕ್ತ ಪ್ರತಿಭಟನಾಕಾರರ ಗುಂಪು ಪೋಲೀಸರೊಂದಿಗೆ ಘರ್ಷಣೆ ಮಾಡಿ ಬ್ಯಾರೀಕೇಡ್ ಗಳನ್ನು ಮುರಿದು ಒಳನುಗ್ಗಿದ್ದಾರೆ. ಇದನ್ನು ಫೇಸ್ಬುಕ್ ನಲ್ಲಿ ಲೈವ್ ಸ್ಟರೀಮ್ ಮಾಡಲಾಗಿದೆ. ರಾಜಪಕ್ಸೆ ವಿರುದ್ಧ ಘೋಷಣೆಗಳನ್ನು ಕೂಗುತ್ತ ಕಾರಡಾರ್ ನಲ್ಲಿ ಓಡುತ್ತಿರುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ಪ್ರತಿಭಟನಾಕಾರರು ಮತ್ತು ಪೊಲೀಸರು ಘರ್ಷಣೆ ನಡೆಸಿದ್ದರಿಂದ ಇಬ್ಬರು ಪೊಲೀಸರು ಸೇರಿದಂತೆ ಕನಿಷ್ಠ ಏಳು ಜನರು ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ.
Irresponsible socialism, endless freebies, and Chinese loans lead to bankruptcy.
Bankruptcy leads to this👇🏼 #SriLankaProtests pic.twitter.com/yW95IIzMvF— Abhijit Majumder (@abhijitmajumder) July 9, 2022
Massive #SriLankaProtests right now in Colombo demanding President @GotabayaR should resign. pic.twitter.com/iFCbKTPsTd
— Aditya Raj Kaul (@AdityaRajKaul) July 9, 2022