ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದೀಗ ವಿಪರೀತ ಮಳೆಯಿಂದಾಗಿ ವೈರಲ್ ಜ್ವರ, ಕೆಮ್ಮ, ನೆಗಡಿ, ರುಚಿ ಹಾಳಾಗುವಿಕೆ ಎಲ್ಲವೂ ಒಟ್ಟೊಟ್ಟಿಗೇ ಬರುತ್ತವೆ. ಚಳಿಗೆ ಬಿಸಿ ಬಿಸಿಯಾದ ಚಹಾ ಅಥವಾ ಕಾಫಿ ಕುಡಿಯಬೇಕು ಅನಿಸುತ್ತದೆ. ಆದರೆ, ಈ ಕಾಫಿ ಚಹಾದಿಂದ ಈ ರೋಗಗಳು ವಾಸಿಯಾಗುವುದಿಲ್ಲ ಸ್ವಲ್ಪ ಖಾರ ಖಾರವಾಗಿ ಶುಂಠಿ ಕಾಫಿ ಮಾಡಿ ಕುಡಿಯುವುದರಿಂದ ಆರೋಗ್ಯವೂ ಕುದುರುತ್ತದೆ. ಆಹಾ ಎನಿಸುವ ಘಳಿಗೆ ನಿಮ್ಮದಾಗುತ್ತದೆ. ಸಿಹಿಗಿಂತ ಸ್ವಲ್ಪ ಖಾರವಾಗಿ ಮಾಡಿ ಕುಡಿಯುವುದು ಉತ್ತಮ.
ಬೇಕಾಗುವ ಪದಾರ್ಥಗಳು
ಶುಂಠಿ
ಜೀರಿಗೆ
ಮೆಣಸು
ಕೊತ್ತಂಬರಿ ಕಾಳು
ಏಲಕ್ಕಿ ಒಂದು
ಚಿಟಿಕೆ ಅರಿಶಿನ
ಬೆಲ್ಲ
ಹಾಲು
ನೀರು
ಮಾಡುವ ವಿಧಾನ:
ಒಂದು ಕಾಫಿ ಬಟ್ಟಲಿಗೆ ಮೊದಲಿಗೆ ನಿಮಗೆ ಅಗತ್ಯವಿರುವಷ್ಟು ನೀರು ಹಾಕಿ ಅದಕ್ಕೆ ರುಚಿಗೆ ತಕ್ಕಷ್ಟು ಬೆಲ್ಲ, ಅರ್ಧಂಬರ್ಧ ಜಜ್ಜಿದ ಶುಂಠಿ, ಮೆಣಸು, ಕೊತ್ತಂಬರಿ ಕಾಳು, ಜೀರಿಗೆ, ಏಲಕ್ಕಿ, ಅರಿಶಿನ, ಬೆಲ್ಲ ಎಲ್ಲವನ್ನೂ ಹಾಕಿ( ಪುದೀನಾ-ಆಯ್ಕೆ) ಚೆನ್ನಾಗಿ ರಸ ಬಿಡುವವರೆಗೂ ಕುದಿಸಬೇಕು.(15-20ನಿಮಿಷ) ಅದರ ಖಾರದ ಘಮಲು ಮೂಗಿಗೆ ತಾಕುವವರೆಗೆ ಕುದಿಸಿದರೆ ಬಹಳ ರಸವತ್ತಾಗಿರುತ್ತದೆ. ಕೊನೆಗೆ ಅದಕ್ಕೆ ಹಾಲು ಸೇರಿಸಿ ಮತ್ತೆ ಒಂದು ಉಕ್ಕು ಬರುವವರೆಗೆ ಕುದಿಸಿ ಶೋಧಿಸಿ ಕುಡಿಯಿರಿ.