ಕಿಲಾಡಿ ಅಕ್ಷಯ್‌ ಹೊಸ ಚಿತ್ರದ ಲುಕ್ ವೈರಲ್‌;‌‌ ಅಕ್ಕಿ ಹೊಸ ಅವತಾರ ನೋಡಿ ಅಚ್ಚರಿಪಟ್ಟ ಫ್ಯಾನ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್‌ 
ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಕ್ಷಯ ಮುಂದಿನ ಚಿತ್ರದಲ್ಲಿ
ಕಲ್ಲಿದ್ದಲು ಗಣಿ ರಕ್ಷನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಫಸ್ಟ್ ಲುಕ್ ಔಟ್ ಆಗಿದೆ. 1989ರಲ್ಲಿ ರಾಣಿಗಂಜ್ ಕೋಲ್‌ಫೀಲ್ಡ್‌ನಲ್ಲಿ ಗಣಿಯಲ್ಲಿ ಸಿಲುಕಿದ್ದ 64 ಗಣಿಗಾರರನ್ನು ರಕ್ಷಿಸಿದ ಗಣಿ ಎಂಜಿನಿಯರ್ ಜಸ್ವಂತ್ ಸಿಂಗ್ ಗಿಲ್ ಸಾಹಸದ ಸುತ್ತ ಚಿತ್ರದ ಕಥೆಯು ಸುತ್ತುತ್ತದೆ. ಚಿತ್ರದಲ್ಲಿ ಅಕ್ಷಯ್ ಗಿಲ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ವಶು ಭಗ್ನಾನಿ ಮತ್ತು ಜಾಕಿ ಭಗ್ನಾನಿ ನಿರ್ಮಿಸುತ್ತಿರುವ ಈ ಈ ಚಿತ್ರವನ್ನು ಟಿನು ಸುರೇಶ್ ದೇಸಾಯಿ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ‘ಕ್ಯಾಪ್ಸುಲ್ ಗಿಲ್’ ಎಂದು ಹೆಸರಿಡಲಾಗಿದೆ ಎಂಬ ಮಾಹಿತಿಯಿದೆ. ವರದಿಯ ಪ್ರಕಾರ, ಅಕ್ಷಯ್ ಪ್ರಸ್ತುತ ಬ್ರಿಟನ್‌ ನಲ್ಲಿ ಚಿತ್ರೀಕರಣದಲ್ಲಿದ್ದಾರೆ. 100 ಎಕರೆಗೂ ದೊಡ್ಡದಾದ ಕೃಷಿ ಭೂಮಿಯಲ್ಲಿ ಈ ಚಿತ್ರದ ಚಿತ್ರೀಕರಣ ಸಾಗುತ್ತಿದ್ದು, ಅಲ್ಲಿಗೆ ಜನರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎನ್ನುತ್ತದೆ ವರದಿ. ಅಷ್ಟಾದರೂ ಲಂಡನ್ ನ ಯಾರ್ಕ್ ಶೈರ್ ಮೈದಾನದಲ್ಲಿ ಚಿತ್ರೀಕರಣ ಸಾಗುತ್ತಿರುವಾಗ ಅಭಿಮಾನಿಯೊಬ್ಬರು ಚಿತ್ರತಂಡದ ಕಣ್ಣುತಪ್ಪಿಸಿ ಅಕ್ಷಯ್‌ ಫೋಟೋ ಕ್ಲಿಕ್ಕಿಸಿದ್ದು, ಪಂಜಾಬಿ ಪೇಟ ಧರಿಸಿರುವ ಅಕ್ಷಯ್ ಹೊಸ ಅವತಾರ ನೋಡಿ ಫ್ಯಾನ್ಸ್‌ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಅಕ್ಷಯ್‌ ವಿಭಿನ್ನ ಲುಕ್‌ ಗೆ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.
ಈ ಚಿತ್ರ ಹೊರತುಪಡಿಸಿ ಅಕ್ಷಯ್ ಅವರ ಬಳಿ ‘ಗೋರ್ಖಾ’, ‘ರಾಮ್ ಸೇತು’, ‘ಓ ಮೈ ಗಾಡ್ 2’, ‘ಸೂರರೈ ಪೊಟ್ರು’ ಹಿಂದಿ ರಿಮೇಕ್ ಸೇರಿದಂತೆ ಮತ್ತಷ್ಟು ಚಿತ್ರಗಳಿವೆ. ಅಕ್ಷಯ್ ಭೂಮಿ ಪೆಡ್ನೇಕರ್ ಅವರೊಂದಿಗೆ‌ ನಟಿಸಿರುವ, ಆನಂದ್ ಎಲ್ ರೈ ನಿರ್ದೇಶನದ ‘ರಕ್ಷಾ ಬಂಧನ’ ಬಿಡುಗಡೆಗೆ ಸಜ್ಜಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!