ಉದ್ಧವ್ ಠಾಕ್ರೆ ಸರ್ಕಾರ ಮುರಿದು ಬಿದ್ದ ಹಿಂದಿನ ಕಾರಣ ಬಹಿರಂಗಪಡಿಸಿದ ‘ಮಹಾ’ ಸಿಎಂ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

‘ಮಹಾ’ ಸಿಎಂ ಏಕನಾಥ್​ ಶಿಂಧೆ ಆಡಳಿತದ ಚುಕ್ಕಾಣಿ ಹಿಡಿದ ಬಳಿಕ ಮೊದಲ ಬಾರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ಈ ವೇಳೆ ಅಘಾಡಿ ಸರ್ಕಾರದ ಕುರಿತು ಪ್ರತಿಕ್ರಿಯಿಸಿದ ಅವರು, ಸಾಂಪ್ರದಾಯಿಕ ಮೈತ್ರಿಗೆ ವಾಪಸ್ಸಾಗಿ, ಎನ್​ಸಿಪಿ ಮೈತ್ರಿಯಿಂದ ಹೊರಬನ್ನಿ ಎಂದು ಹಲವು ಬಾರಿ ಉದ್ಧವ್​ ಠಾಕ್ರೆ ಅವರಿಗೆ ಮನವಿ ಮಾಡಿದ್ದರೂ ಕೇಳಿರಲಿಲ್ಲ ಎಂದು ಶಿಂಧೆ ಹೇಳಿದ್ದಾರೆ.
ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಠಾಕ್ರೆ ಸರ್ಕಾರ ಮುರಿದು ಬೀಳಲು ಕಾರಣವನ್ನು ಬಹಿರಂಗಪಡಿಸಿದ ಶಿಂಧೆ, ಅಘಾಡಿ ಸರ್ಕಾರದಿಂದ ಯಾವೊಬ್ಬ ಶಾಸಕರೂ ಹಾಗೂ ಸಚಿವರಿಗೂ ಇಷ್ಟವಿರಲಿಲ್ಲ ಹಾಗಾಗಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳಿ ಎಂದು ಕೇಳಿಕೊಂಡರೂ ಉದ್ಧವ್​ ಕೇಳಿರಲಿಲ್ಲ . ಮೂರ್ನಾಲ್ಕು ಬಾರಿ ಎಲ್ಲಾ ಶಾಸಕರೂ ಒಟ್ಟಿಗೆ ಸೇರಿ ಅವರಲ್ಲಿ ಮನವಿ ಮಾಡಿಕೊಂಡಿದ್ದೆವು. ಆದರೂ ಇದಕ್ಕೆ ಒಪ್ಪದಿರುವುದರಿಂದ ಅವರ ಸರ್ಕಾರ ಬೀಳಲು ಕಾರಣವಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!