ನಿಜವಾದ ಅಪದ್ಭಾಂದವರೆಂದರೆ ಇವರೇ: ತಮ್ಮ ಜೀವ ಪಣಕ್ಕಿಟ್ಟು ಉರಿಯುತ್ತಿದ್ದ ಕಾರಿನಿಂದ ಚಾಲಕನ ಉಳಿಸಿದರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಜನರು ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿದ್ದಾಗ ಹೀರೋಗಳು ಅಪತ್ಬಾಂದವರಂತೆ ಧಾವಿಸಿಬಂದು ಅವರನ್ನು ರಕ್ಷಿಸುವುದನ್ನು  ಸಿನೆಮಾದಲ್ಲಿ ನೋಡಿರುತ್ತೇವೆ. ಅದರೆ ನಿಜ ಜೀವನದಲ್ಲಿ ಇಂತ ಹೀರೋಗಳ ಸಂಖ್ಯೆ ಕಡಿಮೆ, ಕಷ್ಟದಲ್ಲಿರುವವರನ್ನು ನೋಡಿದಾಗ ನಮಗ್ಯಾಕೆ ಅದರ ಉಸಾಬರಿ ಎಂದು ಮಂದೆ ಸಾಗುವವರ ಸಂಖ್ಯೆಯೇ ಜಾಸ್ತಿ. ಆದರೆ ಕೆನಡಾದಲ್ಲಿ ಐವರು ವ್ಯಕ್ತಿಗಳು ತಮ್ಮ  ಜೀವ ಪಣಕ್ಕಿಟ್ಟು ಜೀವನ್ಮರಣದ ಹೋರಾಟದಲ್ಲಿದ್ದ ವ್ಯಕ್ತಿಯನ್ನು ರಕ್ಷಿಸುವ ಮೂಲಕ ಜಗತ್ತಿನ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಾರೆ.
ಈ ಪ್ರಕರಣ ನಡೆಸಿದ್ದು ಕೆನಡಾದ ಒಂಟಾರಿಯೋ ರಸ್ತೆಯಲ್ಲಿ. ಐವರು ವ್ಯಕ್ತಿಗಳು ಕಷ್ಟದ ಸನ್ನಿವೇಶವನ್ನು ದೈರ್ಯದಿಂದ ಎದುರಿಸುತ್ತಿರುವ ವೀಡಿಯೊವನ್ನು OPP ಸಾಮಾಜಿಕ ಮಾಧ್ಯಮವು ತನ್ನ ಚಾನೆಲ್‌ಗಳಲ್ಲಿ ಪೋಸ್ಟ್ ಮಾಡಿದೆ. ಈ ರಸ್ತೆಯಲ್ಲಿ ಕಾರಿನಲ್ಲಿ ಸಾಗುತ್ತಿದ್ದ ಟೊರೆಂಟೋ ಮೂಲದ 36 ವರ್ಷದ ವ್ಯಕ್ತಿ ಇದ್ದಕ್ಕಿದ್ದಂತೆ ಪ್ರಜ್ಞಾಹೀನನಾಗಿದ್ದಾನೆ.
ಈ ವೀಡಿಯೋ ಪ್ರಾರಂಭವಾಗುತ್ತಿದ್ದಂತೆ, ಬಿಳಿ ಬಣ್ಣದ ಸೆಡಾನ್ ಕಾರು ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಸಾಗುವುದು ಕಾಣಿಸುತ್ತದೆ. ಕೆಲವು ಸೆಕೆಂಡುಗಳ ನಂತರ, ಕಾರು ಯಾವುದೋ ವಸ್ತುವಿಗೆ ಬಡಿದು ಅಪಘಾತಕ್ಕೀಡಾಗುತ್ತಿರುವುದನ್ನು ಮತ್ತು ದಟ್ಟವಾದ ಕಪ್ಪು ಹೊಗೆಯಿಂದ ಆವರಿಸಲ್ಪಟ್ಟಿದನ್ನು ಕಾಣಬಹುದು.
ವಿಡೀಯೋದ ಆನಂತರದ ಕ್ಲಿಪ್‌ ಗಳಲ್ಲಿ ಚಾಲಕನಿಗೆ ಪರಿಚಯವೇ ಇಲ್ಲದ ಐವರು ಪುರುಷರು ಅನಾಹುತ ಸಂಭವಿಸುವ ಮುನ್ನ ಚಾಲಕನನ್ನು ಅಲ್ಲಿಂದ ಹೊರತರಲು ಜೀವಪಣಕ್ಕಿಟ್ಟು ಪ್ರಯತ್ನಿಸುವುದನ್ನು ಕಾಣಬಹುದಾಗಿದೆ. ಅಷ್ಟರಲ್ಲಿ ವಾಹನದಿಂದ ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡಿದೆ.

ಅಪಾಯವನ್ನು ಅರಿತುಕೊಂಡ ಐವರು ಕಾರಿನ ಡೋರಿಗೆ ಒದ್ದು, ಮೊಣಕೈಯಿಂದ ಗುದ್ದಿ, ಸುತ್ತಿಗೆಯಿಂದ ಡೋರನ್ನು ಒಡೆದು ಚಾಲಕನ ಸೀಟಿನ ಪಕ್ಕದ ಕಿಟಕಿಯನ್ನು ಒಡೆದು ಆತನನ್ನು ಅಲ್ಲಿಂದ ಹೊರಕ್ಕೆಳೆಯಲು ಶತಪ್ರಯತ್ನ ನಡೆಸಿದ್ದಾರೆ. ಆ ಸಂದರ್ಭದಲ್ಲಿ ಬೆಂಕಿ ಎಲ್ಲೆಡೆ ವ್ಯಾಪಿಸುತ್ತಿರುದನ್ನು ಕಂಡು ರಕ್ಷಿಸುತ್ತಿರುವವರಲ್ಲಿ ಒಬ್ಬಾತನ ಪತ್ನಿ ಅವರು ವಾಪಸ್‌ ಬರುವಂತೆ ಗೋಗರೆಯುತ್ತಾ ಜೋರಾಗಿ ಅಳುವುದು ಕೇಳಬಹುದು. ಕಾರಿಗೆ ಬೆಂಕಿ ತಗುಲುತ್ತಿದ್ದಂತೆ,  “ಅಲ್ಲಿಂದ ಓಡಿ ಓಡಿ.. ನಿಮ್ಮ ಪ್ರಾಣ ರಕ್ಷಿಸಿಕೊಳ್ಳಿʼ ಎಂದು ದಾರಿಹೋಕರು ಈ ರಕ್ಷಕರನ್ನು ಕೂಗಿ ಎಚ್ಚರಿಸುವುದು ಕೇಳಿಸುತ್ತದೆ,” ಕೊನೆವರೆಗೆ ಸಾಧ್ಯವಿರುವ ಎಲ್ಲಾ ಹೋರಾಟಗಳನ್ನು ನಡೆಸಿ ಈ ಐವರು ವ್ಯಕ್ತಿಗಳು ಚಾಲಕನನ್ನು ಹೊರಗೆಳೆದಿದ್ದಾರೆ. ಇದಕ್ಕೆಲ್ಲ ಅವರಿಗೆ ಲಭಿಸಿದ್ದು ಕೇವಲ ಒಂದೆರೆಡು ನಿಮಿಷಗಳು ಮಾತ್ರ. ಅದಾದ ಕೇವಲ 30 ಸೆಕೆಂಡಿನಲ್ಲಿ ಕಾರು ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡಿದೆ.
ತಮ್ಮ ಪ್ರಾಣವನ್ನೇ ಅಪಾಯಕ್ಕೆ ಒಡ್ಡಿಕೊಂಡು ಇನ್ನೊಬ್ಬರ ಪ್ರಾಣ ಉಳಿಸಿದ ನಿಮ್ಮಂತ ಧೀರರು ಅಪರೂಪ ಎಂದು ವಿಡಿಯೋ ನೋಡಿದ ಜನರು ಶ್ಲಾಘಿಸುತ್ತಿದ್ದಾರೆ. ಒಂಟಾರಿಯೊ ಪ್ರಾಂತೀಯ ಪೊಲೀಸರು ಧೈರ್ಯದ ಪ್ರದರ್ಶನಕ್ಕಾಗಿ ಈ ಸಾಹಸಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ, ಅವರನ್ನು ” ನಿಜವಾದ ಹೀರೋಗಳು” ಎಂದು ಬಣ್ಣಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here