ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ 8ವಿಕೆಟ್ ಕಳೆದಕೊಂಡ ಟೀಂ ಇಂಡಿಯಾ 170ರನ್ಗಳಿಕೆ ಮಾಡಿದ್ದು, ಇಂಗ್ಲೆಂಡ್ ಗೆಲುವಿಗೆ 171ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಪರ ರೋಹಿತ್ ಶರ್ಮಾ(31) ಗ್ಲೀಸನ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಬಂದ ವಿರಾಟ್ ಕೊಹ್ಲಿ(1) ಗ್ಲೀಸನ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರೆ, ನಂತರದ ಎಸೆತದಲ್ಲೇ ಪಂತ್(26) ಗ್ಲೀಸನ್ ಓವರ್ನಲ್ಲಿ ಕ್ಯಾಚ್ ನೀಡಿದರು.
ಸೂರ್ಯಕುಮಾರ್ ಯಾದವ್(15), ಪಾಂಡ್ಯಾ(12), ಕಾರ್ತಿಕ್(12) ವಿಕೆಟ್ ಒಪ್ಪಿಸಿದರು. ಆದರೆ, ಏಕಾಂಗಿಯಾಗಿ ಹೋರಾಟ ನಡೆಸಿದ ರವೀಂದ್ರ ಜಡೇಜಾ 46ರನ್ಗಳಿಕೆ ಮಾಡಿ ಅಜೇಯರಾಗಿ ಉಳಿದರು. ಇವರಿಗೆ ಹರ್ಷಲ್ ಪಟೇಲ್(12) ಸಾಥ್ ನೀಡಿದರು.