ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ, ಕೊಡಗು ಗಡಿಭಾಗದಲ್ಲಿ ಭಾನುವಾರ ಮುಂಜಾನೆ 6.42ರ ಸುಮಾರಿಗೆ ಮತ್ತೆ ಭೂಮಿ ನಡುಗಿದೆ. ಈ ಭಾಗದಲ್ಲಿ ಸತತ ಎಂಟನೇ ಬಾರಿಗೆ ಭೂಮಿ ಕಂಪಿಸಿದ್ದು, ಜನತೆ ಮತ್ತೆ ಭಯಭೀತರಾಗಿದ್ದಾರೆ.
ಎಲ್ಲೆಲ್ಲಿ ಕಂಪನ?
ಸುಳ್ಯ, ಮರ್ಕಂಜ, ಎಲಿಮಲೆ, ಅರಂತೋಡು, ಸಂಪಾಜೆ, ಪೆರಾಜೆ ಭಾಗಗಳಲ್ಲಿ ಸ್ಪಷ್ಟ ಕಂಪನದ ಅನುಭವವಾಗಿದೆ.
ಇದೇ ವೇಳೆ ಭಾರೀ ಸದ್ದು ಕೂಡಾ ಕೇಳಿಸಿದೆ.