ಇಂದು ಬಕ್ರೀದ್‌ ಸಂಭ್ರಮ: ಹಬ್ಬಕ್ಕೆ ಶುಭ ಹಾರೈಸಿದ ಪ್ರಧಾನಿ ನರೇಂದ್ರ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮುಸ್ಲಿಮರ ಪ್ರಮುಖ ಹಬ್ಬಗಳಲ್ಲಿ ‘ಬಕ್ರೀದ್‌’ ಕೂಡ ಒಂದು. ಇಸ್ಲಾಮಿಕ್‌ ಕ್ಯಾಲೆಂಡರಿನ ಪ್ರಕಾರ ‘ದುಲ್‌ಹಜ್ಜ್‌’ ತಿಂಗಳ 10ರಂದು ಈ ಹಬ್ಬ ಆಚರಿಸಲಾಗುತ್ತದೆ. ಇಸ್ಲಾಮಿನ ಇತಿಹಾಸವನ್ನು ಸ್ಮರಿಸುವ ಈ ಹಬ್ಬ ಮನುಷ್ಯನಲ್ಲಿ ಮುಖ್ಯವಾಗಿ ಇರಬೇಕಾದ ಸಹೋದರತೆ, ತ್ಯಾಗ, ಸಮರ್ಪಣಾ ಮನೋಭಾವ, ಬದ್ಧತೆಯ ಗುಣಗಳನ್ನು ನೆನಪಿಸುತ್ತದೆ. ಬಕ್ರೀದ್‌ ಹಬ್ಬದಂದು ಮುಸ್ಲಿಂ ಬಾಂಧವರು ಮಸೀದಿಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಾರೆ. ಹಬ್ಬಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್‌ನಲ್ಲಿ ಶುಭಾಷಯ ಕೋರಿದ್ದಾರೆ.

ರಾಷ್ಟ್ರಪತಿ ರಾಮನಾಥ ಕೋವಿಂದ್‌ ಉರ್ದುವಿನಲ್ಲೇ ಶುಭಾಶಯ ತಿಳಿಸಿದ್ದಾರೆ. ʻದೇಶದ ಎಲ್ಲಾ ಮುಸ್ಲಿಂ ಸಹೋದರ ಸಹೋದರಿಯರಿಗೆ ಶುಭಾಶಯಗಳು. ಈ ಹಬ್ಬವು ತ್ಯಾಗ ಮತ್ತು ಸೇವೆಯ ಸಂಕೇತವಾಗಿದೆ. ಸೇವೆಗೆ ನಮ್ಮನ್ನು ಮುಡಿಪಾಗಿಟ್ಟು ದೇಶದ ಅಭ್ಯುದಯ ಮತ್ತು ಸಮಗ್ರ ಅಭಿವೃದ್ಧಿಗೆ ಶ್ರಮಿಸೋಣʼ ಎಂದು ರಾಷ್ಟ್ರಪತಿ ಟ್ವೀಟ್‌ ಮಾಡಿದ್ದಾರೆ.

ʻಈದ್ ಮುಬಾರಕ್! ಈದ್-ಉಲ್-ಅಧಾ ಶುಭಾಶಯಗಳು. ಈ ಹಬ್ಬವು ಮಾನವಕುಲದ ಒಳಿತಿಗಾಗಿ ಸಾಮೂಹಿಕ ಯೋಗಕ್ಷೇಮ ಮತ್ತು ಸಮೃದ್ಧಿಯ ಮನೋಭಾವವನ್ನು ಹೆಚ್ಚಿಸಿ, ಒಟ್ಟಿಗೆ ಕೆಲಸ ಮಾಡಲು ನಮಗೆ ಪ್ರೇರೇಪಿಸಲಿ ಎಂದು ಮೋದಿ ಹಾರೈಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!