ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ಚೋಪಾಲ್ ಮಾರುಕಟ್ಟೆಯಲ್ಲಿರುವ ನಾಲ್ಕು ಅಂತಸ್ತಿನ ಕಟ್ಟಡ ಶನಿವಾರ ಕುಸಿದು ಬಿದ್ದಿದೆ. ಕಟ್ಟಡ ಬೀಳುವ ಮುನ್ನ ತೆರವು ಮಾಡಿದ್ದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಅದೇ ಕಟ್ಟಡದಲ್ಲಿ UCO ಬ್ಯಾಂಕ್ನ ಶಾಖೆ ಸೇರಿದಂತೆ, ಡಾಬಾ, ಬಾರ್ ಹಾಗೂ ಇತರೆ ಕೆಲವು ವ್ಯಾಪಾರ ವಹಿವಾಟುಗಳು ನಡೆಯುತ್ತಿದ್ದವು.
ಎರಡನೇ ಶನಿವಾರವಾದ್ದರಿಂದ ಕಟ್ಟಡದಲ್ಲಿ ಯಾರೂ ಇರಲಿಲ್ಲ ಮತ್ತು ಬ್ಯಾಂಕ್ಗೆ ರಜೆ ಇದ್ದುದರಿಂದ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿರುವ ಏಳು ಮಂದಿ ನೌಕರರು ಘಟನೆಯ ವೇಳೆ ಸ್ಥಳದಲ್ಲಿ ಇರಲಿಲ್ಲ ಎಂದು ಮುಖ್ಯ ವ್ಯವಸ್ಥಾಪಕ ರಮೇಶ್ ದಾದ್ವಾಲ್ ತಿಳಿಸಿದ್ದಾರೆ. ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಬೀಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
#WATCH | Himachal Pradesh: A four-storey building collapsed in Chopal town in Shimla amid heavy rainfall. The building was already vacated by the local administration pic.twitter.com/FiJbCLty9r
— ANI (@ANI) July 9, 2022