ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯ ದೇವರಕೊಂಡಗಿರುವ ಕ್ರೇಜ್ ಗೊತ್ತೇ ಇದೆ. ಅರ್ಜುನ್ ರೆಡ್ಡಿ ಚಿತ್ರದ ಮೂಲಕ ತೆಲುಗು ಮಾತ್ರವಲ್ಲದೆ ಬಾಲಿವುಡ್ ನಲ್ಲೂ ಹೆಸರು ಮಾಡಿ ಪಕ್ಕಾ ರೌಡಿ ಹೀರೋ ಅಂತಲೇ ಹೆಸರು ಮಾಡಿದ್ದಾರೆ. ತನ್ನ ರಗಡ್ ಲುಕ್ ಖಡಕ್ ಮಾತಿನಿಂದ ಹುಡುಗಿಯರ ಮನ ಗೆದ್ದಿದ್ದಾರೆ. ಚಿತ್ರರಂಗದಲ್ಲಿ ಹೀರೋಯಿನ್ ಗಳಿಗೂ ವಿಜಯ್ ದೇವರಕೊಂಡ ಅವರೇ ಬೇಕು.! ಸ್ಯಾಂಡಲ್ವುಡ್ನಿಂದ ಹಿಡಿದು ಬಾಲಿವುಡ್ವರೆಗೂ ಕೆಲ ಹೀರೋಯಿನ್ಗಳ ಫೇವರೆಟ್ ಆಗಿದ್ದಾರೆ ಈ ರೌಡಿ ಹೀರೋ. ಅವರ ಸಾಲಿಗೆ ಬೀಟೌನ್ ಬೆಡಗಿಯರಾದ ಜಾಹ್ನವಿ ಕಪೂರ್ ಹಾಗೂ ಸಾರಾ ಅಲಿಖಾನ್ ಕೂಡ ಸೇರಿದ್ದಾರೆ.
ಬಾಲಿವುಡ್ನಲ್ಲಿ ಫೇಮಸ್ ಕಾರ್ಯಕ್ರಮ ಕಾಫಿ ವಿತ್ ಕರಣ್ ಏಳನೇ ಸೀಸನ್ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಪ್ರಸಾರವಾಗಲಿದೆ. ಈ ಕಾರ್ಯಕ್ರಮದ ಎರಡನೇ ಸಂಚಿಕೆಗೆ ಬಾಲಿವುಡ್ ಸ್ಟಾರ್ ಮಕ್ಕಳಾದ ಸಾರಾ ಅಲಿಖಾನ್ ಮತ್ತು ಜಾನ್ವಿ ಕಪೂರ್ ಅತಿಥಿಗಳಾಗಿ ಬಂದಿದ್ದರು. ಈ ಕಾರ್ಯಕ್ರಮದಲ್ಲಿ ಇಬ್ಬರೂ ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ಹೋಗೋ ಬಗ್ಗೆ ಮಾತನಾಡಿರುವ ಪ್ರೋಮೋ ವೈರಲ್ ಆಗಿದೆ. ನೀವು ಡೇಟಿಂಗ್ ಹೋಗೋದಾದ್ರೆ ಯಾರ ಜೊತೆ ಹೋಗುತ್ತೀರಿ ಎಂದು ಕರಣ್ ಕೇಳಿದ ಪ್ರಶ್ನೆಗೆ ಇಬ್ಬರೂ ನಾಯಕಿಯರು ವಿಜಯ್ ದೇವರಕೊಂಡ ಹೆಸರೇಳಿದ್ದಾರೆ.
ಈ ವಿಡಿಯೋ ಬಗ್ಗೆ ಪ್ರತಿಕ್ರಯಿಸಿರುವ ವಿಜಯ್ ದೇವರಕೊಂಡ “ನನ್ನ ಮೇಲೆ ಇಷ್ಟು ಪ್ರೀತಿಯನ್ನು ತೋರಿಸಿದ್ದಕ್ಕಾಗಿ ನನ್ನ ಅಪ್ಪುಗೆ ಮತ್ತು ಪ್ರೀತಿಯನ್ನು ನಿಮಗೆ ಕಳುಹಿಸುತ್ತಿದ್ದೇನೆ” ಎಂದು ಪೋಸ್ಟ್ ಮಾಡಿದ್ದಾರೆ.