ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪರೂಪದ ಪುನುಗು ಬೆಕ್ಕನ್ನು ಅರಣ್ಯ ರಕ್ಷಕ ಶ್ರೀಧರ ಭಜಂತ್ರಿ ಹಾಗೂ ಸಿಬ್ಬಂದಿ ಹಿಡಿದು ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟ ಘಟನೆ ಶುಕ್ರವಾರ ನಡೆದಿದೆ.
ಮುಂಡಗೋಡದ ಹುನಗುಂದ ಗ್ರಾಮದ ಯಲ್ಲಪ್ಪ ಶಿವಳ್ಳಿ ಎಂಬುವರ ಮನೆಯಲ್ಲಿ ಶುಕ್ರವಾರ ಪುನುಗು ಬೆಕ್ಕಿನ ರಕ್ಷಣೆ ಮಾಡಲಾಗಿದೆ. ಸುರಕ್ಷಿತವಾಗಿ ಹಿಡಿದ ಪುನುಗು ಬೆಕ್ಕನ್ನು ಪಶು ವೈದ್ಯಾಕಾರಿಗಳು ಚಿಕಿತ್ಸೆ ನೀಡಿದ ನಂತರ ಕಾಡಿಗೆ ಬಿಡಲಾಯಿತು. ಈ ಕಾರ್ಯಾಚರಣೆಯಲ್ಲಿ ಶಿವಪ್ಪ ಶಿರ್ಮಾ ಹಾಗೂ ಅಮಿತ್ ಸಣ್ಣಕ್ಕಿ ಸಹಾಯ ಮಾಡಿದರು.