ರಾಜಸ್ಥಾನದ ಶಾಲೆಗಳಲ್ಲಿ ‘ಅಮ್ಮಿ-ಅಬ್ಬು’- ಪಾಲಕರ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಒಂದು ಕಾಲವಿತ್ತು. ಆಗ ಒಂದು ವರ್ಗವನ್ನು ವಿಪರೀತವೆನ್ನುವಷ್ಟು ಓಲೈಕೆ ಮಾಡಲಾಗುತ್ತಿತ್ತು. ಆಗ ಪ್ರಶ್ನಿಸುವರೂ ಕಡಿಮೆಯಿದ್ದರು. ಈಗ ಕಾಲ ಬದಲಾಗಿದೆ. ಜನರು ಹೆಚ್ಚು ಜಾಗ್ರತರಾಗಿದ್ದಾರೆ. ರಾಜಸ್ಥಾನದಲ್ಲಿ ಇಂತಹದ್ದೊಂದು ಘಟನೆ ವರದಿಯಾಗಿದೆ.  ಅಲ್ಲಿನ ಕೋಟಾದ ಖಾಸಗಿ ಶಾಲೆಯೊಂದು 2ನೇ ತರಗತಿಯ ಎಳೆಯ ಮಕ್ಕಳಿಗೆ ಬೋಧಿಸಲಾಗುವ ಪುಸ್ತಕದಲ್ಲಿ ಉರ್ದು ಪದಗಳು ಮತ್ತು ಹೆಸರುಗಳನ್ನು ತುರುಕಲಾಗಿದೆ. ಈ ಶಾಲೆಯಲ್ಲಿ ಓದುವ ಬಹುಪಾಲು ಮಕ್ಕಳು ಮುಸ್ಲಿಮೇತರ ವಿದ್ಯಾರ್ಥಿಗಳು. ಈ ಪುಸ್ತಕ ಓದಿ ಮನೆಗೆ ಬರುವ ಮಕ್ಕಳು ʼಅಮ್ಮಿʼ ʼಅಬ್ಬುʼ ಎಂದೇ ಕರೆಯುತ್ತಿವೆ ಎಂಬುದು ಹೆತ್ತವರ ಅಳಲು. ಈ ಕುರಿತು ಕೆರಳಿದ ಪೋಷಕರು ಶಾಲೆಯ ಆಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!