ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯ ಫುಲ್ ಫೇಮ್ ನಲ್ಲಿದ್ದಾರೆ. ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ರಶ್ಮಿಕಾ ಹವಾ ಜೋರಾಗೇ ಸಾಗುತ್ತಿದೆ. ಇತ್ತೀಚೆಗಂತೂ ಬಾಲಿವುಡ್ನಲ್ಲಿ ನಡೆಯುವ ಪ್ರತಿ ಕಾರ್ಯಕ್ರಮಕ್ಕೂ ಹಾಜರಾಗುತ್ತಾರೆ. ಬಾಲಿವುಡ್ ಹೀರೋಯಿನ್ ಗಳ ಹಾಗೆ ತುಂಡು ಬಟ್ಟೆ, ಡಿಫರೆಂಟ್ ಡ್ರೆಸ್ ಗಳನ್ನು ಟ್ರೈ ಮಾಡುತ್ತಾ ಅವುಗಳನ್ನು ಮೆಂಟೇನ್ ಮಾಡಲು ಬರದೆ ಟ್ರೋಲ್ ಅಗುತ್ತಿದ್ದಾರೆ.
ಈ ಹಿಂದೆಯೂ ಸಹ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ರಶ್ಮಿಕಾ ಕಪ್ಪು ಶಾರ್ಟ್ ಡ್ರೆಸ್ ಧರಿಸಿ, ನಡೆಯಲು ಸಹ ಆದಗೆ ತೊಂದರೆ ಅನುಭವಿಸಿದ್ದರು. ಇದೀಗ ಮತ್ತೊಂದು ಅವಾರ್ಡ್ ಫಂಕ್ಷನ್ ನಲ್ಲಿ ರೆಡ್ ಶಾರ್ಟ್ ಡ್ರೆಸ್ ಹಾಕಿಕೊಂಡು ನೆಟಿಜನ್ ಮತ್ತೊಮ್ಮೆ ಆಹಾರವಾಗಿದ್ದಾರೆ. ಇತ್ತೀಚೆಗಷ್ಟೇ ಮುಂಬೈನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ರಶ್ಮಿಕಾ ರೆಡ್ ಕಲರ್ ಶಾರ್ಟ್ ಡ್ರೆಸ್ನಲ್ಲಿ ಕಂಡುಬಂದರು. ನಡೆಯಲೂ ಆಗದೆ ಮತ್ತೊಬ್ಬರ ಸಹಾಯ ತೆಗೆದುಕೊಂಡು ಬರುತ್ತಿರುವುದು ಎಲ್ಲೆಡೆ ವೈರಲ್ ಆಗಿದೆ. ಸೋಫಾದಲ್ಲಿ ಕುಳಿತು ಫೋಟೋಗೆ ಪೋಸ್ ನೀಡುವ ವೇಳೆಯೇ ಮುಜುಗರವಾದಂತೆ ನಡೆದುಕೊಂಡಿದ್ದಾರೆ.
ಮೇಲ್ಮೋಟಕ್ಕೆ ಮುಗುಳ್ನಗುತ್ತಿದ್ದರೂ ಅವರ ಮುಖವೇ ಮುಜುಗರಕ್ಕೊಳಗಾದ ಭಾಔ ಎದ್ದು ಕಾಣುತ್ತಿತ್ತು. ಇಂತಹ ತುಂಡು ಬಟ್ಟೆ ಧರಿಸೋದ್ಯಾಕೆ? ಅದರಿಂದ ಮುಜುಗರಕ್ಕೊಳಗಾಗೋದ್ಯಾಕೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ಇನ್ನೊಂದೆಡೆ ರಶ್ಮಿಕಾ ಅಭಿಮಾನಿಗಳು ಈ ಕೆಂಪು ಡ್ರೆಸ್ ನಲ್ಲಿ ಸೂಪರ್ ಹಾಟ್ ಆಗಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.