ಆಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣ: ನಾಲ್ವರು ಮಾಜಿ ಐಎಎಫ್ ಅಧಿಕಾರಿಗಳಿಗೆ ಸಮನ್ಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿದಂತೆ ನಾಲ್ವರು ಮಾಜಿ ಐಎಎಫ್ ಅಧಿಕಾರಿಗಳಿಗೆ ದೆಹಲಿ ನ್ಯಾಯಾಲಯ ಸೋಮವಾರ ಸಮನ್ಸ್ ನೀಡಿದ್ದು, ಜುಲೈ 30 ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಿದೆ.
3,600 ಕೋಟಿ ರೂ.ಗಳ ಮೊತ್ತದ ಇವಿಐಪಿ ಹೆಲಿಕಾಪ್ಟರ್ ಹಗರಣದಲ್ಲಿ ಮಾಜಿ ರಕ್ಷಣಾ ಕಾರ್ಯದರ್ಶಿ ಶಶಿ ಕಾಂತ್ ಶರ್ಮಾ ಹಾಗೂ ಈ ನಾಲ್ವರು ಮಾಜಿ ಐಎಎಫ್ ಅಧಿಕಾರಿಗಳ ವಿರುದ್ಧ ಸಿಬಿಐ ಆರೋಪಪಟ್ಟಿ ದಾಖಲಿಸಿದೆ.
ಫೆಬ್ರವರಿ 2010 ರಲ್ಲಿ, ಆಗಿನ ಯುಪಿಎ ಸರ್ಕಾರವು 556.262 ಮಿಲಿಯನ್ ಯುರೋ ಮೌಲ್ಯದ 12 ಆಗಸ್ಟಾ ವೆಸ್ಟ್‌ಲ್ಯಾಂಡ್ ಚಾಪರ್‌ಗಳನ್ನು ಖರೀದಿಸುಲ ಒಪ್ಪಂದಕ್ಕೆ ಸಹಿ ಹಾಕಿತ್ತು. ವಿವಿಐಪಿಗಳು ಮತ್ತು ಇತರ ಪ್ರಮುಖ ಗಣ್ಯರನ್ನು ಕರೆದೊಯ್ಯಲು ಈ ಹೆಲಿಕಾಪ್ಟರ್ ಗಳನ್ನು ಖರೀದಿಸಲಾಗುತ್ತಿದೆ.ಆಗಸ್ಟಾ ವೆಸ್ಟ್‌ಲ್ಯಾಂಡ್‌ಗೆ ಅನುಕೂಲವಾಗುವಂತೆ ಚಾಪರ್ ವಿಶೇಷಣಗಳನ್ನು ಮೂಲ ಒಪ್ಪಂದದಿಂದ ಬದಲಾಯಿಸಲಾಗಿದೆ ಎಂದು ಆರೋಪಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!