ಹೊಸದಿಗಂತ ವರದಿ, ಮಡಿಕೇರಿ:
ಇಲ್ಲಿಗೆ ಸಮೀಪದ ಎರಡನೇ ಮೊಣ್ಣಂಗೇರಿಯಲ್ಲಿ ಜಲಸ್ಫೋಟ ಸಂಭವಿಸಿದ್ದು, ಈ ಭಾಗದ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ಸೋಮವಾರ ರಾತ್ರಿ 8ಗಂಟೆ ಸುಮಾರಿಗೆ ಭಾರೀ ಶಬ್ಧದ ಅನುಭವವಾಗಿದ್ದು, ಅಲ್ಲಿ ಹರಿಯುವ ರಾಮಕೊಲ್ಲಿಯಲ್ಲಿ ಭಾರೀ ಪ್ರಮಾಣದ ಕೆಸರು ನೀರು ಹಾಗೂ ಮರದ ದಿಮ್ಮಿಗಳು ಬೆಟ್ಟದಿಂದ ಹರಿದು ಬರುತ್ತಿರುವುದು ಮಂಗಳವಾರ ಮುಂಜಾನೆ ಕಂಡು ಬಂದಿದೆ.
2018ರಲ್ಲಿ ಭೀಕರ ಜಲಸ್ಫೋಟಕ್ಕೆ ಈಡಾಗಿದ್ದ ಎರಡನೇ ಮೊಣ್ಣಂಗೇರಿಯಲ್ಲಿ ಹಲವರು ಜಲಸಮಾಧಿಯಾಗಿದ್ದರು. ಈ ಪೈಕಿ ಕೆಲವರ ಮೃತ ದೇಹಗಳು ಹಲವು ದಿನಗಳ ಬಳಿಕ ಪತ್ತೆಯಾಗಿದ್ದರೆ, ಇನ್ನೂ ಕೆಲವರ ಮೃತದೇಹಗಳೇ ಪತ್ತೆಯಾಗಿರಲಿಲ್ಲ.
ಇದೀಗ ಮತ್ತೆ ಜಲಸ್ಫೋಟ ಸಂಭವಿಸಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ