ಹೊಸದಿಗಂತ ಡಿಜಿಟಲ್ ಡೆಸ್ಕ್
ನನ್ನ ಊರಿನಿಂದಾನೇ ನಮಗೆ ಅಕ್ಕಿ, ಬೇಳೆ, ಕಾಯಿ, ಎಣ್ಣೆ ಎಲ್ಲಾ ಬರುತ್ತೆ, ಪತ್ನಿ ಖರ್ಚಿಗೆ ಕೇಳಿದರೆ ಅಗತ್ಯಕ್ಕೆ ತಕ್ಕಷ್ಟು ಹಣ ಕೋಡುತ್ತೇನೆ. ಇನ್ನು ಮನೆ ಬಜೆಟ್ ಇದುವರೆಗೂ ಮಂಡಿಸಿಲ್ಲ…
ಇದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರ ಮಾತು.
ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಸಂದರ್ಭ ಕೆಲಕಾಲ ರಾಜಕಾರಣ ಮರೆತು ತಮ್ಮ ವಿಚಾರಗಳನ್ನು ಹಂಚಿಕೊಂಡ ಸಿದ್ರಾಮಣ್ಣ, ನನಗೆ ನನ್ನ ಮನೆಯ ಬಜೆಟ್ ಗೊತ್ತಿಲ್ಲ. ಹೆಂಡತಿ ಕೇಳಿದಾಗ ಖರ್ಚಿಗೆ ದುಡ್ಡು ಕೊಡ್ತೀನಿ ಅಷ್ಟೇ ಎಂದು ನಗೆಯಾಡಿದರು.
ನಾನು ಯಾವತ್ತೂ ನನ್ನ ಮನೆಯ ಬಜೆಟ್ ಅನ್ನು ಮಂಡಿಸಿಲ್ಲ, ಅದೇನಿದ್ದರೂ ಹೆಂಡತಿಯೇ ನೋಡಿಕೊಳ್ತಾಳೆ, ನನ್ನ ರಾಜಕೀಯ ಜೀವನಕ್ಕೆ ಕುಟುಂಬದಿಂದ ಅಡ್ಡಿಯಾಗಿಲ್ಲ, ಅವರ ಸಂಪೂರ್ಣ ಸಹಕಾರ ಸಿಕ್ಕಿದೆ ಎಂದು ಅವರು ಹೇಳಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ