Friday, August 12, 2022

Latest Posts

SHOCKING | 24 ಗಂಟೆ ಅವಧಿಯಲ್ಲಿ ಕಾನೂನು ಭಂಜಕರಿಂದ ಮತ್ತೋರ್ವ ಅಧಿಕಾರಿಯ ಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕಳೆದ‌ 24 ಗಂಟೆಯ ಅವಧಿಯಲ್ಲಿ ಕಾನೂನು ಭಂಜಕರಿಂದ ಮತ್ತೊಂದು ಕಾನೂನು ಪಾಲಕರ ಹತ್ಯೆಯಾಗಿದೆ.
ಹರ್ಯಾಣದ ನುಹ್ ಜಿಲ್ಲೆಯಲ್ಲಿ ಗಣಿ ಮಾಫಿಯಾ ಅಟ್ಟಹಾಸಕ್ಕೆ ಪೊಲೀಸ್ ಉಪ ಅಧೀಕ್ಷಕರು ಬಲಿಯಾದ ಬೆನ್ನಿಗೇ ಜಾರ್ಖಂಡ್ ನಲ್ಲಿ ಇನ್ನೊಂದು ಪ್ರಕರಣ ನಡೆದಿದ್ದು, ವಾಹನ ತಪಾಸಣೆ ಮಾಡುತ್ತಿದ್ದ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಹತ್ಯೆ ನಡೆಸಲಾಗಿದೆ.
ಬುಧವಾರ ನಸುಕಿನ ಜಾವ 3 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಮಹಿಳಾ ಸಬ್ ಇನ್ಸ್‌ಪೆಕ್ಟರ್ ಸಂಧ್ಯಾ ಟೋಪ್ನೋ ಮೃತಪಟ್ಟವರು.
ವಾಹನ ತಪಾಸಣೆಯ ಕರ್ತವ್ಯದಲ್ಲಿನಿರತರಾಗಿದ್ದ ಸಂದರ್ಭ ವೇಗವಾಗಿ ಬಂದ ದನ ಕಳ್ಳಸಾಗಣೆ ಮಾಡುತ್ತಿದ್ದ ಪಿಕಪ್ ವ್ಯಾನ್ ನಿಲ್ಲಿಸಲು ಹೇಳಿದ ಸೂಚನೆ ದಿಕ್ಕರಿಸಿ ಪೊಲೀಸ್ ಅಧಿಕಾರಿಯ ಮೇಲೆ ವಾಹನ ಹರಿಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಹಿಳಾ ಅಧಿಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಅತಿ ವೇಗದಲ್ಲಿ ಚಲಿಸಿದ ಪಿಕಪ್ ವ್ಯಾನಿನ ರಿಂಗ್ ರಸ್ತೆಯಲ್ಲಿ ಪಲ್ಟಿಯಾಗಿದೆ. ಈ ವೇಳೆ ಆರೋಪಿಗಳು ವಾಹನದಿಂದ ಜಿಗಿದು ಪರಾರಿಯಾಗಿದ್ದು, ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss