ಹೊಸದಿಗಂತ ಡಿಜಿಟಲ್ ಡೆಸ್ಕ್:
ಯೂಟ್ಯೂಬ್ ಚಾನೆಲ್‌ಗೆ ವೀವ್ಸ್ ಕಡಿಮೆ ಬಂದಿದೆ ಎಂದು ಖಿನ್ನತೆಗೊಳಗಾಗಿ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಚಂದ್ರಶೇಖರ್ ಧೀನಾ (22) ಆತ್ಮಹತ್ಯೆಗೆ ಮಾಡಿಕೊಂಡ ವಿದ್ಯಾರ್ಥಿ.
ಹೈದರಾಬಾದ್‌ನ ಸೈದಾಬಾದ್‌ನಲ್ಲಿ ಈ ಘಟನೆ ನಡೆದಿದೆ.
ಧೀನಾ, ಗ್ವಾಲಿಯರ್ ಐಐಐಟಿಎಂನಲ್ಲಿ ಎಂಜಿನಿಯರಿಂಗ್ ನಾಲ್ಕನೇ ವರ್ಷ ಪೂರ್ಣಗೊಳಿಸಿದ್ದು, ರಜೆ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಊರಿಗೆ ಮರಳಿದ್ದು, ಮನೆಯಲ್ಲಿಯೇ ನಾಲ್ಕು ವರ್ಷದ ಹಿಂದೆ ತಾನು ಆರಂಭಿಸಿದ್ದ ಯೂಟ್ಯೂಬ್ ಚಾನೆಲ್‌ನಲ್ಲೇ ರಾತ್ರಿ 11 ರಿಂದ ಬೆಳಗ್ಗೆ 6 ರವರೆಗೆ ಕೆಲಸಮಾಡುತ್ತಿದ್ದ. ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಕರ ಸಂಖ್ಯೆ ಕಡಿಮೆಯಾಗಿದ್ದಕ್ಕೆ ಖಿನ್ನತೆಗೆ ಜಾರಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಾಲ್ಯದಿಂದ ಜೀವನದುದ್ದಕ್ಕೂ ಅನುಭವಿಸಿದ್ದೇನೆ. ಪ್ರಪಂಚದಿಂದ ಬೇರೆಯಾಗುವ ಸಮಯ ಈಗ ಬಂದಿದೆ ಎಂದು ಅತ ಬರೆದಿದೆ ಎನ್ನಲಾದ ಡೆತ್ ನೋಟ್ ತನಿಖಾಧಿಕಾರಿಗಳಿಗೆ ಲಭಿಸಿದೆ.