Friday, December 5, 2025

ದಿನಭವಿಷ್ಯ: ಶಿಸ್ತಿನ ಕೆಲಸಕ್ಕೆ ಮನ್ನಣೆ ಕೊಡಿ, ಸೋಂಬೇರಿಯಾದರೆ ಸಮಸ್ಯೆ ತಪ್ಪಿದ್ದಲ್ಲ

ಮೇಷ
ಶಿಸ್ತಿನ ಕೆಲಸಕ್ಕೆ ಗಮನ ಕೊಡಿ. ಬೇಕಾಬಿಟ್ಟಿ ಧೋರಣೆ ಬೇಡ. ಮನೆಯಲ್ಲಿ ವಿರಸ ಶಮನ. ಸಾಲವಾಗಿ ಕೊಟ್ಟ ಹಣ ಮರಳಿ ಸಿಗುವುದು.  
ವೃಷಭ
ಆಪ್ತ ಸಂಬಂಧದಿಂದ ಹೊರಬರಲು ಇಚ್ಛಿಸಿದ್ದರೆ ಅದನ್ನು ವಿನಯದಿಂದ ಮಾಡಿ. ಇನ್ನೊಬ್ಬರ ಮನಸ್ಸು ನೋಯಿಸಬೇಡಿ. ಧನ ಗಳಿಕೆ ಹೆಚ್ಚಲಿದೆ.      
ಮಿಥುನ
ವೃತ್ತಿ ಒತ್ತಡ ನಿಮ್ಮನ್ನು ಬಸವಳಿಸುವುದು. ಅವಿವಾಹಿತರಿಗೆ ಸಂಬಂಧ ಕೂಡಿಬಂದೀತು. ಹೊಸ ವ್ಯವಹಾರದಲ್ಲಿ ಹಣ ಹೂಡಲು ಸಕಾಲ.
ಕಟಕ
ಇತರರ ಏಳಿಗೆಗೆ ದುಡಿಯುತ್ತಾ ನಿಮ್ಮ ಹಿತಾಸಕ್ತಿ ಮರೆಯದಿರಿ. ವೃತ್ತಿಯಲ್ಲಿ  ಉನ್ನತಿಗೆ ಹೊಸ ಅವಕಾಶ ಸಿಗಲಿದೆ. ಆಪ್ತರ ಜತೆ ಆನಂದಕೂಟ.
ಸಿಂಹ
ವೃತ್ತಿಯಲ್ಲಿ ಪ್ರಗತಿ. ನಿಮ್ಮ ಸಾಮರ್ಥ್ಯಕ್ಕೆ ಮನ್ನಣೆ. ಕಚೇರಿ ರಾಜಕೀಯದಲ್ಲಿ ಸಿಲುಕದಿರಿ. ವಿವೇಕದಿಂದ ವರ್ತಿಸುವುದೊಳಿತು.  
ಕನ್ಯಾ
ವೃತ್ತಿಯಲ್ಲಿ   ಪ್ರಗತಿ. ಇಷ್ಟಾರ್ಥ ಸಿದ್ಧಿ.  ಮಿತ್ರರ ಸಂಗಡ ಕಠಿಣ ಧೋರಣೆ ಬೇಡ. ವಾಗ್ವಾದದಿಂದ ದೂರವಿರಿ. ಕೌಟುಂಬಿಕ ಸಾಮರಸ್ಯ ಹೆಚ್ಚಲಿದೆ.
ತುಲಾ
ಹೊಸ ವ್ಯವಹಾರ ತಕ್ಷಣಕ್ಕೆ ಕೈ ಹಿಡಿಯದು. ಹಳೆಯದನ್ನೆ ಉತ್ತಮ ಪಡಿಸಲು ಯೋಜಿಸಿ. ವಿರೋಧ ಕಟ್ಟಿಕೊಳ್ಳದೆ ಸಹಕಾರ ಪಡೆಯಿರಿ.
ವೃಶ್ಚಿಕ
ಹಳೆಯ ತಪ್ಪು ಸರಿಪಡಿಸುವುದು ಒಳಿತು. ಅದನ್ನೆ ಸಮರ್ಥಿಸಬೇಡಿ. ಆಪ್ತರಲ್ಲಿ ನಿಮ್ಮ ಭಾವನೆ ಹಂಚಿಕೊಳ್ಳಿ. ಮನಸಿನ ಹೊರೆ ಕಡಿಮೆಯಾಗಲಿದೆ.
ಧನು
ಎಂದಿನಂತೆ ಸಹಜ ದಿನ. ವಿಶೇಷ ಘಟಿಸದು. ಕುಟುಂಬದ ಜತೆ ಹೊರಗೆ ತಿರುಗಾಡಿ, ಆನಂದಿಸಿ. ಏಕತಾನತೆಯ ಬದುಕಿಂದ  ಹೊರಬನ್ನಿ.    
ಮಕರ
ವೃತ್ತಿಯಲ್ಲಿ ಉನ್ನತಿ ಕಾಣುವ ಹೊಸ ಅವಕಾಶ ತೆರೆಯಲಿದೆ. ಸಣ್ಣಮಟ್ಟಿನ ಅನಾರೋಗ್ಯ ಕಾಡಬಹುದು. ಕೌಟುಂಬಿಕ ಸಹಕಾರ.
ಕುಂಭ
   ಕೆಲಸದ ಒತ್ತಡ ಕಡಿಮೆಯಾಗಲಿದೆ. ವ್ಯವಹಾರ ಸುಗಮ. ಕುಟುಂಬಸ್ಥರ ಜತೆ ಹೊಂದಾಣಿಕೆ ಇರಲಿ. ಅಸಂತೃಪ್ತಿ ತ್ಯಜಿಸಿ.
  ಮೀನ
ಕೆಲಸಕ್ಕೆ ಪೂರ್ಣ ಗಮನ ಕೊಡಿ. ಬಾಕಿ ಉಳಿಸದಿರಿ. ಸಂಗಾತಿಯ ಬೇಡಿಕೆ ಈಡೇರಿಸುವ ಮೂಲಕ ಅವರಲ್ಲಿ  ನಗು ಮೂಡಿಸುವಿರಿ.  

error: Content is protected !!