ಹೊಸದಿಗಂತ ವರದಿ, ಕಲಬುರಗಿ:
ವ್ಯಕ್ತಿ ಯೋವ೯ನಿಗೆ ಅಪಹರಣ ಮಾಡಿಕೊಂಡು,ತಾವು ಸಿಬಿಐ ಅಧಿಕಾರಿಗಳು ಎಂದು ಹೆದರಿಸಿ,1.20 ಲಕ್ಷ ಕೇಳಿದ್ದ,ಮೂವರು ನಕಲಿ ಸಿಬಿಐ ಅಧಿಕಾರಿಗಳು ಅಫಜಲಪುರ ತಾಲೂಕಿನ ದೇವಲ ಗಾಣಗಾಪುರ ಪೋಲಿಸರು ಬಲೆಗೆ ಬಿದ್ದು,ಬಂಧನವಾಗಿದ್ದಾರೆ.
ಅಫಜಲಪುರ ತಾಲೂಕಿನ ಚೌಡಾಪುರದ ಹಣಮಂತರಾವ್ ಎಂಬುವವರಿಗೆ ಬೆದರಿಕೆ ಹಾಕಿ, ಹಣ ವಸೂಲಿ ಮಾಡಲು ಮುಂದಾಗಿದ್ದರು,ಈ ಮೂವರು ನಕಲಿ ಸಿಬಿಐ ಅಧಿಕಾರಿಗಳು.
ರಾಮು ಪವಾರ್, ಜ್ಞಾನೇಶ್, ಬಸವರಾಜ ಎಂಬುವವರೇ ನಕಲಿ ಸಿಬಿಐ ಅಧಿಕಾರಿಗಳು ಎಂದು ಹಣ ವಸೂಲಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
11 ಲಕ್ಷ ಹಣ ಕೊಟ್ಟರೆ ಮಾತ್ರ, ಬಿಡುತ್ತೇವೆ.ಇಲ್ಲವಾದರೆ ಜೈಲಿಗೆ ಕಳಿಸುತ್ತೇವೆ ಎಂದು ಮೂರು ಜನ ನಕಲಿ ಅಧಿಕಾರಿಗಳು ಬೆದರಿಕೆ ಹಾಕಿದ್ದರು.ಇದೀಗ ಆ ನಕಲಿ ಅಧಿಕಾರಿಗಳು ಪೋಲಿಸರ ಬಲೆಗೆ ಬಿದ್ದಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವಲಗಾಣಗಾಪುರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.