ಅಂತಾ ಜಿಲ್ಲಾ ಕಳ್ಳನ ಬಂಧನ: ಬೈಕ್ ಪೊಲೀಸರ ವಶಕ್ಕೆ

ಹೊಸದಿಗಂತ ವರದಿ, ಮುಂಡಗೋಡ:

ಅಂತಾ ಜಿಲ್ಲಾ ಬೈಕ್ ಕಳ್ಳನನ್ನು ಪೊಲೀಸರು ಬಂಧಿಸಿ ಬಂದಿತನಿಂದ ಒಂದು ಬೈಕ್ ವಶಪಡಿಸಿಕೊಂಡ ಘಟನೆ ಮಂಗಳವಾರ ಜರುಗಿದೆ.
ಬಂಧಿತ ಆರೋಪಿಯನ್ನು ಹಾವೇರಿ ತಾಲೂಕಿನ ಹುಲಗನಕೊಪ್ಪ ಗ್ರಾಮದ ಅನಿಲ ಶಿವಪ್ಪ ಭೋವಿ ವಡ್ಡರ ಎಂಬಾತನೆ ಬಂಧಿತ ಆರೋಪಿಯಾಗಿದ್ದಾನೆ.
ಜೂನ್ 5 2021 ರಂದು ಕಾತೂರ ಗ್ರಾಮದ ಸಿರಾಜ್ ಬೊಮ್ಮನಳ್ಳಿ ಎಂಬುವರ ಮನೆಯ ಮುಂದೆ ಇದ್ದ ಬೈಕ್ ಕಳ್ಳತನ ಮಾಡಿ ನಾಪತ್ತೆ ಆಗಿದ್ದ ಅಲ್ಲದೆ ಬೈಕ್ ನೊಂದಣಿ ಬದಲಿಸಿ ಬೈಕ್ ಚಲಾಯಿಸುತ್ತಿದ್ದ ಎನ್ನಲಾಗಿದೆ. ಅಲ್ಲದೆ ಮನೆ ಕಳ್ಳತನಕ್ಕೆ ಇದೆ ವಾಹನ ಬಳಸುತ್ತಿದ್ದ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ ಈತನ ಮೇಲೆ 40 ಕ್ಕೂ ಹೆಚ್ಚು ಮನೆ ಕಳ್ಳತನ ಹಾಗೂ ಮೊಬೈಲ್ ಕಳ್ಳತನ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಸೊಲ್ಲಾಪುರ, ಪುನಾ, ಕೊಲ್ಲಾಪುರ ಸೇರಿದಂತೆ ಇನ್ನೂ ಹಲವುಕಡೆಗಳಲ್ಲಿ ಭಾಗಿಯಾಗಿದ್ದಾನೆ.
ಈ ಮೊದಲು ಸೊಲ್ಲಾಪುರದಲ್ಲಿ ಕಳ್ಳತನ ಪ್ರಕರಣದಲ್ಲಿ ಒಂದು ವರ್ಷ ಜೈಲು ಅನುಭವಿಸಿ ಹೊರ ಬಂದಿದ್ದ ಖಚಿತವಾದ ಮಾಹಿತಿ ಮೆರೆಗೆ ಮುಂಡಗಿಒಡ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೆಕರ್, ಹೆಚ್ಚುವರಿ ಎಸ್.ಪಿ ಎಸ್ ಬದರಿನಾಥ, ಡಿ.ವಾಯ್.ಎಸ್.ಪಿ ರವಿ ನಾಯ್ಕ, ಸಿಪಿಐ ಸಿದ್ದಪ್ಪ ಸಿಮಾನಿ ಅವರ ನೇತ್ರತ್ವದಲ್ಲಿ ವಿಶೇಷ ತಂಡ ರಚಿಸಿ ತನಿಖೆ ಕೈ ಗೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ಸಿಪಿಐ ಸಿದ್ದಪ್ಪ ಸಿಮಾನಿ, ಪಿ‌ಎಸ್.ಐ ಬಸವರಾಜ್ ಮಬನೂರ, ಎನ್ ಡಿ ಜಕ್ಲಣ್ಣನವರ ಹಾಗೂ ಮಣಿಮಾಲನ್ ಮೆಸ್ತಾ, ಸಲೀಮ, ವೆಂಕಟೇಶ ನಾಗರೊಳ್ಳಿ, ಅಣ್ಣಪ್ಪ ಬುಡಿಗೇರ, ಬಸವರಾಜ್ ಲಮಾಣಿ, ವಿವೇಕ್ ಪಟಗಾರ, ಸಹದೇವ, ಶರತ್ ದೇವಳ್ಳಿ ಇವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೆಕರ್ ಪ್ರಶಂಸಿಸಿ ಸಾಧನೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!