ರೋಹಿತ್, ಕಾರ್ತಿಕ್‌ ಅಮೋಘ ಬ್ಯಾಟಿಂಗ್: ವೆಸ್ಟ್‌ ಇಂಡೀಸ್‌ ಗೆ 191 ರನ್ ಟಾರ್ಗೆಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ 6 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿದೆ. ಈ ಮೂಲಕ ಗೆಲುವಿಗೆ 191  ರನ್ ಟಾರ್ಗೆಟ್ ನೀಡಿದೆ.
ನಾಯಕ ರೋಹಿತ್‌ ಶರ್ಮಾ (64) ಅರ್ಧಶತಕದ ಬಲದಿಂದ ಭಾರತ ಉತ್ತಮ ಮೊತ್ತ ಗಳಿಸುವಲ್ಲಿ ಯಶಸ್ವಿಯಾಯಿತು.
ಭಾರತ ಪರ ಸೂರ್ಯಕುಮಾರ್‌ ಯಾದವ್‌(24), ಶ್ರೇಯಸ್‌ ಅಯ್ಯರ್‌(0), ರಿಷಭ್‌ ಪಂತ್‌ (14) ಹಾಗೂ ಹಾರ್ದಿಕ್ ಪಾಂಡ್ಯ(1), ರವೀಂದ್ರ ಜಡೇಜಾ (16) ರನ್ ಗೆ ವಿಕೆಟ್‌ ಒಪ್ಪಿಸಿದರು.
ಬಳಿಕ ಬಂದ ದಿನೇಶ್‌ ಕಾರ್ತಿಕ್‌ (41) ಉತ್ತಮ ಬ್ಯಾಟಿಂಗ್ ನಡೆಸಿ ಟೀಮ್ ಇಂಡಿಯಾ ರನ್ ಮೊತ್ತವನ್ನು ಹೆಚ್ಚಿಸಿದರು. ಅಂತಿಮವಾಗಿ ಭಾರತ 6 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!