SHOCKING NEWS | ಮಲಯಾಳಂ ನಟ ಶರತ್ ಚಂದ್ರನ್ ಶವವಾಗಿ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಮಲಯಾಳಂ ನಟ ಶರತ್ ಚಂದ್ರನ್ ಶವವಾಗಿ ಪತ್ತೆಯಾಗಿದ್ದಾರೆ.
ಅವರಿಗೆ 37 ವರ್ಷ ವಯಸ್ಸಾಗಿತ್ತು. ಇನ್ನು ಈ ನಟನ ಸಾವಿಗೆ ನಿಖರ ಕಾರಣವಿನ್ನೂ ತಿಳಿದುಬಂದಿಲ್ಲ.
ಶರತ್ ತ ಅಂಗಮಾಲಿ ಡೈರೀಸ್ ಸಿನಿಮಾ ಮೂಲಕ ಪ್ರಸಿದ್ಧಿ ಪಡೆದಿದ್ದು, ಇತರ ಜನಪ್ರಿಯ ಚಿತ್ರಗಳಲ್ಲಿ ಕೂಡೆ, ಒರು ಮೆಕ್ಸಿಕನ್ ಅಪರಥ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇನ್ನು ಕೊಚ್ಚಿ ಮೂಲದವರಾದ ಶರತ್, ಈ ಹಿಂದೆ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದರು. ಅವರು ಡಬ್ಬಿಂಗ್ ಕಲಾವಿದರಾಗಿ ಚಲನಚಿತ್ರದಲ್ಲಿಯೂ ಕೆಲಸ ಮಾಡಿದರು. ಅನೀಸ್ಯ ಚಿತ್ರದ ಮೂಲಕ ಚಂದ್ರನ್ ಮಲಯಾಳಂ ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದರು.
ನಟ ಶರತ್‌ ತಂದೆ ಚಂದ್ರನ್ ಮತ್ತು ಲೀಲಾ ಅವರನ್ನ ಅಗಲಿದ್ದು, ಶ್ಯಾಮ್ ಚಂದ್ರನ್ ಎಂಬ ಸಹೋದರನೂ ಇದ್ದಾನೆ. ಇನ್ನು ಇವ್ರ ಅಂತ್ಯಕ್ರಿಯೆ ನಾಳೆ ನಡೆಯಲಿದೆ ಎಂದು ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!