ಜಿಹಾದಿಗಳಿಂದ ಪ್ರವೀಣ್‌ ನೆಟ್ಟಾರು ಹತ್ಯೆಗೆ ಕಾರಣವಾಗಿರಬಹುದಾದ 3 ಅಂಶಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜುಲೈ 26ರಂದು ನಡೆದ ಭಾರತೀಯ ಜನತಾ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಅವರ ಕೊಲೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಅಲ್ಲದೇ ಇಡೀ ರಾಜ್ಯದ ಜನರು ಈ ದುಷ್ಕೃತ್ಯವನ್ನು ವಿರೋಧಿಸುತ್ತಿದ್ದಾರೆ. ಪ್ರಕರಣದಲ್ಲಿ ಇದುವರೆಗೆ ಇಬ್ಬರು ಮುಸ್ಲಿಂ ಪುರುಷರನ್ನು ಬಂಧಿಸಲಾಗಿದೆ. ಮೊಹಮ್ಮದ್ ಶಫೀಕ್ ಬಳ್ಳೆರೆ ಮತ್ತು ಜಾಕಿರ್ ಸವಣೂರು ಎಂದು ಅವರನ್ನು ಗುರುತಿಸಲಾಗಿದೆ. ಇವರಿಬ್ಬರೂ ಪಿಎಫ್‌ಐ ಮತ್ತು ಎಸ್‌ಡಿಪಿಐ ಜೊತೆ ನಂಟು ಹೊಂದಿದ್ದಾರೆ ಎನ್ನಲಾಗುತ್ತಿದ್ದು ಆರೋಪಿ ಶಫೀಕ್ ಬಳ್ಳೆರೆ ಮತ್ತು ಅವರ ತಂದೆ ಪ್ರವೀಣ್ ಕುಮಾರ್ ನೆಟ್ಟಾರು ಅವರ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು ಎಂಬ ಆತಂಕಕಾರಿ ಅಂಶವೊಂದು ಹೊರಬಿದ್ದಿದೆ.ಈ ವಿಷಯವನ್ನು ಸ್ವತಃ ಶಫೀಕ್ ತಂದೆ ಇಬ್ರಾಹಿಂ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಬಹಿರಂಗಪಡಿಸಿದ್ದಾರೆ ಎಂಬ ವರದಿಗಳಿವೆ.

ಈ ಹಿನ್ನೆಲೆಯಲ್ಲಿ ಜಿಹಾದಿಗಳು ಪ್ರವೀಣ್‌ ನೆಟ್ಟಾರು ಅವರನ್ನು ಕೊಲೆ ಮಾಡಲು ಕಾರಣವಾಗಿರಬಹುದಾದ ಮೂರು ಅಂಶಗಳೂ ಇಲ್ಲಿವೆ

  • ಮೊದಲನೇಯದು ನೂಪುರ್‌ ಶರ್ಮಾ ಅವರನ್ನು ಬೆಂಬಲಿಸಿದ್ದಕ್ಕಾಗಿ. ರಾಜಸ್ಥಾನದ ಉದಯಪುರದಲ್ಲಿ ಟೈಲರ್‌ ಕನ್ಹಯ್ಯಲಾಲ್‌ ಹತ್ಯೆ ನಡೆದಾಗ, ಅವರನ್ನು ಬೆಂಬಲಿಸಿದ ಪ್ರವೀಣ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ್ದರು. ಇದೇ ಕಾರಣಕ್ಕೆ ಜಿಹಾದಿಗಳು ಅವರನ್ನು ಕೊಂದಿರಬಹುದು.
  • ಇದಲ್ಲದೇ ಹಿಂದೂ ಯುವಕನೊಬ್ಬನನ್ನು ಥಳಿಸಿದ್ದಕ್ಕೆ, ಕೆಲ ಹಿಂದೂಗಳು ಮುಸ್ಲಿಂ ವ್ಯಕ್ತಿಯನ್ನು ಥಳಿಸಿದ್ದರು. ಆತನ ಸಾವಿಗೆ ಪ್ರತಿಕಾರವಾಗಿ ಪ್ರವೀಣ್‌ ನಿಟ್ಟೂರು ಹತ್ಯೆ ನಡೆದಿರಬಹುದು
  • ಇನ್ನೂ ಮೂರನೇಯದೆಂದರೆ ಪ್ರವೀಣ್‌ ನೆಟ್ಟಾರು ಆ ಪ್ರದೇಶದಲ್ಲಿ ಚಿಕನ್ ಶಾಪ್ ತೆರೆದಿದ್ದರು, ಇದು ಅಲ್ಲಿನ ಮುಸ್ಲಿಂ ಮಾಂಸದಂಗಡಿಗಳನ್ನು ಹಿಂದಿಕ್ಕಿ ಅವರಿಗೆ ವ್ಯಾಪಾರ ಕಡಿಮೆ ಮಾಡಿತ್ತು, ಅಲ್ಲದೇ ಅಲ್ಲಿನ ಹಿಂದುಗಳ ಬಳಿ ಹಿಂದೂ ಅಂಗಡಿಗಳಲ್ಲಿಯೇ ಮಾಂಸ ಖರೀದಿಸಿ ಎಂದು ಪ್ರವೀಣ ನಿಟ್ಟಾರು ಹೇಳುತ್ತಿದ್ದ, ಈ ವ್ಯಾಪಾರ ದ್ವೇಷವೂ ಕೂಡ ಅವರ ಸಾವಿಗೆ ಕಾರಣವಾಗಿರಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!