ಹೊಸದಿಗಂತ ಡಿಜಿಟಲ್ ಡೆಸ್ಕ್
ವಿಷ ಮಿಶ್ರಿತವಾದ ಮ್ಯಾಗಿ ಸೇವಿಸಿ 27 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ ದುರಂತ ಘಟನೆ ಮುಂಬೈನ ಮಲಾಡ್ನ ಪಾಸ್ಕಲ್ ವಾಡಿ ಪ್ರದೇಶದಲ್ಲಿ ನಡೆದಿದೆ.
ರೇಖಾ ನಿಶಾದ್ ಸಾವನ್ನಪ್ಪಿದ ದುರ್ದೈವಿ ಮಹಿಳೆ. ಆಕೆ ಮನೆಯಲ್ಲಿನ ಇಲಿಗಳನ್ನು ಕೊಲ್ಲಲು ಕೆಲದಿನಗಳ ಹಿಂದೆ ಟೊಮ್ಯಾಟೊ ದೊಳಗೆ ಪಾಷಾಣವನ್ನು ಸೇರಿಸಿ ಮೂಲೆಯೊಂದರಲ್ಲಿ ಇಟ್ಟಿದ್ದಳು. ಮ್ಯಾಗಿಯಿಂದ ನೂಡಲ್ಸ್ ತಯಾರಿಸುವಾಗ ಆಕಸ್ಮಿಕವಾಗಿ ಇಲಿ ವಿಷವನ್ನು ಬೆರೆಸಿದ ಟೊಮೆಟೊವನ್ನು ಸೇರಿಸಿಕೊಂಡು ಕತ್ತರಿಸಿದ್ದಾಳೆ. ಆಕೆ ಟಿವಿ ನೋಡಿಕೊಂಡು ಕೆಲಸ ಮಾಡುತ್ತಿದ್ದರಿಂದ ಈ ಅಚಾತುರ್ಯ ನಡೆದಿದ್ದು ಆಕೆಯ ಗಮನಕ್ಕೆ ಬಂದಿರಲಿಲ್ಲ ಎಂದು ಮಾಲ್ವಾನಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮೂಸಾ ದೇವರ್ಶಿ ಹೇಳಿದ್ದಾರೆ.
ಆಕೆ ಊಟ ತಿಂದ ಕೆಲವೇ ಗಂಟೆಗಳಲ್ಲಿ ವಾಂತಿ ಮಾಡಿಕೊಳ್ಳಲಾರಂಭಿಸಿದಳು. ತಕ್ಷಣವೇ ಆಕೆಯ ಪತಿ ಅವಳನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರೇಖಾ ಸಾವನ್ನಪ್ಪಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ