ಹೊಸದಿಗಂತ ಡಿಜಿಟಲ್ ಡೆಸ್ಕ್
ಆಗಸ್ಟ್ 27ರಿಂದ ಯುಎಇ ನಲ್ಲಿ ನಡೆಯಲಿರುವ ಏಷ್ಯಾ ಕಪ್- 2022 ಗಾಗಿ ಪಾಕಿಸ್ತಾನ 15 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ.
ಟಿ.20 ವಿಶ್ವಕಪ್ ಸಮೀಪದಲ್ಲಿರುವುದರಿಂದ ಈ ಬಾರಿ ಏಷ್ಯಾ ಕಪ್ ಅನ್ನು T20 ಸ್ವರೂಪದಲ್ಲಿ ಆಡಲಾಗುತ್ತಿದೆ. ಟಿ20 ಮಾದರಿಗೆ ಸೂಕ್ತವಾಗಬಲ್ಲ ಆಟಗಾರರಿಗೆ ಪಾಕ್ ತಂಡದಲ್ಲಿ ಮಣೆ ಹಾಕಲಾಗಿದೆ. ಔಟ್ ಆಫ್ ಫಾರ್ಮ್ನಲ್ಲಿರುವ ಅನುಭವಿ ಬೌಲರ್ ಹಸನ್ ಅಲಿಯನ್ನು ತಂಡದಿಂದ ಕೈಬಿಡಲಾಗಿದೆ. ಅಲಿ ಬದಲಿಗೆ ಯುವವೇಗಿ ನಸೀಮ್ ಷಾಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಹಿರಿಯ ಆಟಗಾರರರಾದ ಶೋಯಬ್ ಮಲ್ಲಿಕ್ ಹಾಗೂ ಮೊಹಮದ್ ಹಫೀಜ್ ರನ್ನು ತಂಡದಿಂದ ಹೊರಗಿಡಲಾಗಿದೆ.
ಪಾಕಿಸ್ತಾನವು ಆಗಸ್ಟ್ 28 ರಂದು ಭಾರತದ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.
ಪಾಕ್ ಏಷ್ಯಾ ಕಪ್ ತಂಡ:
ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹ್ಯಾರೀಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್ (wk), ಮೊಹಮ್ಮದ್ ವಾಸಿಮ್, ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ, ಶಾನವಾಜ್ ದಹಾನಿ, ಉಸ್ಮಾನ್ ಖಾದಿರ್.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ