ಸಂಜೆ ಸ್ನಾಕ್ಸ್‌ಗಾಗಿ ಮನೆಯಲ್ಲೇ ಮಾಡಿ ಆಲೂ 65!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಪದಾರ್ಥಗಳು:

1/2 ಕೆಜಿ ಆಲೂಗಡ್ಡೆ,
2 ಟೇಬಲ್ಸ್ಪೂನ್ ಮೈದಾ
2 ಟೇಬಲ್ಸ್ಪೂನ್ ಅಕ್ಕಿ ಹಿಟ್ಟು
2 ಟೇಬಲ್ಸ್ಪೂನ್ ಕಾರ್ನ್ ಫ್ಲೋರ್
1 ಟೀಚಮಚ ಕೊತ್ತಂಬರಿ ಪುಡಿ
1/2 ಟೀಚಮಚ ಜೀರಿಗೆ ಪುಡಿ
1/2 ಟೀಚಮಚ ಅರಿಶಿನ ಪುಡಿ
ಎಣ್ಣೆ, ಉಪ್ಪು
4 ರಿಂದ 5 ಎಸಳು ಬೆಳ್ಳುಳ್ಳಿ, ಲವಂಗ
2 ಒಣ ಮೆಣಸಿನಕಾಯಿ
3 ಹಸಿ ಮೆಣಸಿನಕಾಯಿ, ಕರಿಬೇವಿನ ಎಲೆ
1/2 ಕಪ್ ಮೊಸರು, ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ: 

ಒಂದು ಪಾತ್ರೆಯಲ್ಲಿ ನೀರು ಕುದಿಸಿ ಅದಕ್ಕೆ ಅರ್ಧ ಕೆಜಿ ಆಲೂ ಗಡ್ಡೆ ಹಾಕಿ ಅರ್ಧಂಬರ್ಧ ಬೇಯಿಸಿ. ಆಲೂ ಬೆಂದ ಬಳಿಕ ಸಿಪ್ಪೆ ತೆಗೆದು ಸ್ವಲ್ಪ ದಪ್ಪವಾಗಿ ಕತ್ತರಿಸಿಟ್ಟುಕೊಳ್ಳಿ. ಈಗ ಒಂದು ಮಿಕ್ಸಿಂಗ್‌ ಬೌಲ್‌ಗೆ ಮೈದಾ, ಅಕ್ಕಿ ಹಿಟ್ಟು, ಕಾರ್ನ್‌ ಫ್ಲೋರ್‌, ಕೊತ್ತಂಬರಿ ಪುಡಿ, ಜೀರಿಗೆ, ಅರಿಶಿನ ಹಾಕಿ ಉಪ್ಪು ಹಾಕಿ ಬಜ್ಜಿ ಹದಕ್ಕೆ ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ಕತ್ತರಿಸಿದ ಆಲೂ ಪೀಸ್‌ ಹಾಕಿ ಚೆನ್ನಾಗಿ ಕೋಟಿಂಗ್‌ ಮಾಡಿ ಕಾದ ಎಣ್ಣೆಯಲ್ಲಿ ಗೋಲ್ಡನ್‌ ಬ್ರೌನ್‌ ಕಲರ್‌ ಬರುವವರೆಗೆ ಕರಿಯಿರಿ.

ನಂತರ ಒಂದು ಒಂದು ಬಾಣಲೆಗೆ ಎಣ್ಣೆ ಹಾಕಿ ಬೆಳ್ಳುಳ್ಳಿ, ಲವಂಗ ಸಣ್ಣಗೆ ಕತ್ತರಿಸಿ ಹಾಕಿ, ಒಣ ಮೆಣಸಿನಕಾಯಿ, ಹಸಿ ಮೆಣಸಿನ ಕಾರಿ ಕರಿಬೇವು ಹಾಕಿ ಹುರಿಯಿರಿ. ನಂತರ ಮೊಸರು ಹಾಕಿ ಅಗತ್ಯವಿದ್ದರೆ ಫುಡ್‌ ಕಲರ್‌ ಹಾಕಿ ಒಂದು ನಿಮಿಷ ಕುದಿಸಿ ಅದಕ್ಕೆ ಕರಿದಿಟ್ಟ ಆಲೂ ಹಾಕಿ ಚೆನ್ನಾಗಿ ತಿರುಗಿಸಿ, ಕೊತ್ತಂಬರಿ ಸೊಪ್ಪು ಉದುರಿಸಿದರೆ ಆಲೂ 65ರೆಡಿ. ಸಂಜೆ ಸ್ನಾಕ್ಸ್‌ ಆಗಿ, ಮಳೆ ಬರುವ ವೇಳೆ ತಿನ್ನಲು ಬಿಸಿಯಾಗಿ ರುಚಿಕರವಾಗೂ ಇರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!