ಹೊಸದಿತಗಂತ ಡಿಜಿಟಲ್ ಡೆಸ್ಕ್
ಬಿಗ್ ಬಾಸ್ ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಡುವ ರಿಯಾಲಿಟಿ ಶೋಗಳಲ್ಲಿ ಒಂದಾಗಿದೆ. ಪ್ರತಿ ಸೀಸನ್ ನಲ್ಲಿ ವಿಭಿನ್ನವಾಗಿ ಬರುವ ಬಿಗ್ ಬಾಸ್ ಈ ಬಾರಿ ವಿನೂತನ ಪರಿಕಲ್ಪನೆಯಲ್ಲಿ ಒಟಿಟಿ ಮೂಲಕ ಪ್ರಸಾರ ಕಾಣಲಿದೆ.
ಇದರ ವಿಶೇಷತೆಯೆಂದರೆ ಈ ಬಾರಿ ಟಿವಿಯಲ್ಲಿ ಪ್ರಸಾರ ಕಾಣಿವುದಿಲ್ಲ ಬದಲಾಗಿ Voot OTT ಪ್ಲಾಟ್‌ಫಾರ್ಮ್‌ನಲ್ಲಿ ದಿನದ 24 ಗಂಟೆಯೂ ಪ್ರಸಾರವಾಗಲಿದೆ. ಬಿಗ್ ಬಾಸ್ ಕನ್ನಡ OTT ಸೀಸನ್ 1 ಆಗಸ್ಟ್ 6(ನಾಳೆ) ಗ್ರ್ಯಾಂಡ್ ಲಾಂಚ್ ಆಗಲಿದೆ. ಕಾರ್ಯಕ್ರಮಕ್ಕೆ ಎಂದಿನಂತೆ ಕಿಚ್ಚ ಸುದೀಪ್ ನಿರೂಪಣೆ ಇರಲಿದೆ. 6 ವಾರಗಳ ಕಾಲ ಸಾಗಿಬರಲಿರುವ ಸ್ಪರ್ಧೆಯಲ್ಲಿ 18 ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ನಾಳೆ ಕಾಲಿಡಲಿದ್ದಾರೆ. ಬಿಗ್ ಬಾಸ್ ಮನೆಗೆ ಯಾರೆಲ್ಲಾ ಹೋಗಲಿದ್ದಾರೆ ಎಂಬ ವಿಚಾರ ವೀಕ್ಷಕರಲ್ಲಿ ಕುತೂಹಲ ಹುಟ್ಟಿಹಾಕಿದೆ.
ಮೂಲಗಳನ್ನು ಆಧರಿಸಿ ನೋಡುವುದಾದರೆ, ಈಗ ಹೊರಬಿದ್ದಿರುವ ಸಂಭಾವ್ಯ ಅಭ್ಯರ್ಥಿಗಳ ಲೀಸ್ಟ್ ನಲ್ಲಿ ಸೆಲೆಬ್ರಿಟಿಗಳೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ನಾಗಿಣಿ 2, ಮಂಗಳ ಗೌರಿ ಮದುವೆ ಮತ್ತು ಕೃಷ್ಣ ರುಕ್ಮಿಣಿಯಂತಹ ಕಿರುತೆರೆ ಕಾರ್ಯಕ್ರಮಗಳಲ್ಲಿ ಜನಪ್ರೀಯತೆ ಗಳಿಸಿರುವ ನಮ್ರತಾಗೌಡ, ಕನ್ನಡ, ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿರುವ ಖ್ಯಾತನಟಿ ರೇಖಾ ವೇದವ್ಯಾಸ್, ಬಾಲನಟರಾಗಿ ವೃತ್ತಿಜೀವನ ಆರಂಭಿಸಿ ಸ್ಯಾಂಡಲ್‌ವುಡ್ ನಲ್ಲಿ ನಟ, ನಿರ್ಮಾಪಕರಾಗಿ ಪ್ರಖ್ಯಾತಿ ಗಳಿಸಿರುವ ನವೀನ್ ಕೃಷ್ಣ ಅವರಿದ್ದಾರೆ.
ಜೊತೆಗೆ ಖುಷಿ, ಗೆಳೆಯ ಲವ್ ಗುರು, ಗಾನ ಬಜಾನ ಮತ್ತು ಪರಿಚಯ ದಂತಹ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ತರುಣ್ ಚಂದ್ರ, ಕನ್ನಡ ವಾಹಿನಿಯ ಜನಪ್ರಿಯ ಸುದ್ದಿ ನಿರೂಪಕ ಚಂದನ್ ಶರ್ಮಾ, ಕನ್ನಡದ ಜನಪ್ರಿಯ ನಟ ದಿಲೀಪ್ ರಾಜ್, ಖ್ಯಾತ ನಿರ್ಮಾಪಕ ರವಿ ಶ್ರೀವತ್ಸ, ಪ್ರಸಿದ್ಧ ಹಾಸ್ಯನಟ ಮಿಮಿಕ್ರಿ ಗೋಪಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಖ್ಯಾತಿ ಪಡೆದಿರುವ ಭೂಮಿಕಾ ಬಸವರಾಜ್, ರಾಬರ್ಟ್ ಚಿತ್ರದ ನಾಯಕಿ ಆಶಾ ಭಟ್ ದೊಡ್ಡಮನೆಯೊಳಗೆ ಪ್ರವೇಶಿಸಲಿದ್ದಾರೆ ಎನ್ನಲಾಗುತ್ತಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ