ಕರ್ತವ್ಯನಿರತ ಮಹಿಳಾ ಪೊಲೀಸ್ ಸಿಬ್ಬಂದಿಯ ಕೈ ತಿರುಚಿದರೇ ಪ್ರಿಯಾಂಕಾ ಗಾಂಧಿ ವಾದ್ರಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್‌ ದೆಹಲಿಯಲ್ಲಿಂದು ಪ್ರತಿಭಟನೆ ನಡೆಸಿದ್ದು, ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ನಡುವೆ ವಾಗ್ವಾದವೂ ನಡೆಯಿತು. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನೂ ವಶಕ್ಕೆ ತೆಗೆದು, ಬಿಡುಗಡೆ ಮಾಡಿದರು.

ಇದರ ನಡುವೆ ಪ್ರಿಯಾಂಕಾ ಗಾಂಧಿಯವರ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗುತ್ತಿದ್ದು, ಅದರಲ್ಲಿ ಅವರು ತೀವ್ರ ಕೋಪದಲ್ಲಿ ಮಹಿಳಾ ಪೋಲೀಸರೊಬ್ಬರ ಕೈ ತಿರುಚುದಂತೆ ಕಾಣುತ್ತಿದೆ.

ಬಿಜೆಪಿ ನಾಯಕ ಅಮಿತ್ ಮಾಳವೀಯ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದು, ‘ಪ್ರಿಯಾಂಕಾ ವಾದ್ರಾ ಅವರು ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಅವ್ರು ಪೊಲೀಸರ ಕೈ ಹಿಡಿದು ತಿರುಚಿದ್ದು, ನಂತ್ರ ನಮ್ಮ ಮೇಲೆ ಹಲ್ಲೆ ಎಂದು ಪೊಲೀಸರನ್ನು ದೂರುತ್ತಾರೆ’ ಎಂದಿದ್ದಾರೆ.

ಇದೀಗ ಈ ಫೋಟೋ ಮತ್ತು ಪ್ರಿಯಾಂಕಾ ಗಾಂಧಿಯವರ ಕೋಪದ ವರ್ತನೆಯನ್ನ ನೋಡಿದ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರೂ ತುಂಬಾ ಕೋಪಗೊಂಡಿದ್ದಾರೆ. ಒಬ್ಬ ಬಳಕೆದಾರರು, ‘ಮೇಡಂ ನೀವು ಯಾರ ಕೈಯನ್ನ ತಿರುಗಿಸುತ್ತಿದ್ದೀರಿ. ಅವರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪೊಲೀಸ್‌ ಹುದ್ದೆಗೆರಿರುವ ಈ ದೇಶದ ಮಗಳು. ಇನ್ನು ಅವ್ರ ತಂದೆ, ತಾಯಿ, ಸಹೋದರ ಮತ್ತು ಪತಿ ಯಾವುದೇ ಕಳ್ಳತನ ಮಾಡಿಲ್ಲ ಎಂದಿದ್ದಾರೆ.

ಇನ್ನು ಕೆಲವು ಬಳಕೆದಾರರು ಪ್ರಿಯಾಂಕಾ ಗಾಂಧಿಯನ್ನ ಬೆಂಬಲಿಸುತ್ತಿದ್ದು, ಒಬ್ಬ ಬಳಕೆದಾರರು ‘ಅವರು ಗಾಂಧಿ, ದಬ್ಬಾಳಿಕೆ ವಿರುದ್ಧ ನಿಂತದ್ದು ಅವರ ಇತಿಹಾಸ’ ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರನು ತಮಾಷೆಯ ರೀತಿಯಲ್ಲಿ ‘ಒಮ್ಮೆ ಯೋಚಿಸಿ, ರಾಬರ್ಟ್ ವಾದ್ರಾ ಅವರನ್ನ ಮನೆಯಲ್ಲಿ ಹೇಗೆ ನಿಭಾಯಿಸುತ್ತಿರಬೇಕು? ಮತ್ತವರ ಸ್ಥಿತಿ ಏನಾಗಬಹುದು? ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here