ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪದಕ ಬೇಟೆ ಮುಂದುವರಿಯುತ್ತಿದ್ದು, ಇದೀಗ ಲಾನ್ ಬೌಲ್ಸ್ ನಲ್ಲಿ ನಡೆದ ಫೈನಲ್ ನಲ್ಲಿ ಭಾರತೀಯ ಪುರುಷರ ಫೋರ್ಸ್ ತಂಡವು ಉತ್ತರ ಐರ್ಲೆಂಡ್ ವಿರುದ್ಧ 5-18 ರಿಂದ ಬೆಳ್ಳಿ ಪದಕ ಗೆದ್ದಿದೆ.
ಇಂದು 0000 ಮೀಟರ್ ರೇಸ್ ವಾಕ್ ನಲ್ಲಿ ಪ್ರಿಯಾಂಕಾ ಗೋಸ್ವಾಮಿ, 3000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ ಅವಿನಾಶ್ ಸೇಬಲ್ ಅವರು ಬೆಳ್ಳಿ ಪದಕವನ್ನು ಗೆದ್ದಿದ್ದರು. ಈ ಬೆನ್ನಲ್ಲೇ ಇದೀಗ ಮತ್ತೊಂದು ಪದಕ ಬಂದಿದೆ.