ಸಲಾರ್ ಬಿಗ್ ಅಪ್‌ಡೇಟ್: ಹೊಸ ಪೋಸ್ಟರ್‌ನೊಂದಿಗೆ ಚಿತ್ರದ ರಿಲೀಸ್‌ ಡೇಟ್ ಘೋಷಿಸಿದ ʼಹೊಂಬಾಳೆ ಫಿಲ್ಮ್ಸ್ʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
 ಪ್ರಶಾಂತ್​ ನೀಲ್​ ನಿರ್ದೇಶನದಲ್ಲಿ ಪ್ರಭಾಸ್‌ ನಟನೆಯ ಬಹುನಿರೀಕ್ಷಿತ ಆಕ್ಷನ್ ಎಂಟರ್‌ಟೈನರ್ ‘ಸಲಾರ್’ ಚಿತ್ರದ ಕುರಿತು ಅಭಿಮಾನಿಗಳ ನಿರೀಕ್ಷೆ ಗರಿಗೆದರಿದೆ. ‘ಕೆಜಿಎಫ್​: ಚಾಪ್ಟರ್​ 2’ ಸೂಪರ್​ ಹಿಟ್​ ಆಗಿರುವುದರಿಂದ ‘ಸಲಾರ್​’ ಮೇಲಿನ ಅಭಿಮಾನಿಗಳ ಹೈಪ್​ ದುಪ್ಪಟ್ಟಾಗಿದೆ. ಹಿಟ್‌ ಚಿತ್ರಗಳನ್ನು ನೀಡುತ್ತಿರುವ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್​’ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಈ ಚಿತ್ರ ಬಿಡುಗಡೆ ಯಾವಾಗ ಎಂದು ಕೇಳುತ್ತಿದ್ದ ಫ್ಯಾನ್ಸ್‌ಗಳಿಗೆ ಇಂದು ಸ್ವಾತಂತ್ರೋತ್ಸವದ ಪ್ರಯುಕ್ತ ಚಿತ್ರತಂಡ ದೊಡ್ಡ ಅಪ್‌ಡೇಟ್‌ ನೀಡಿದೆ. ಸಲಾರ್‌ ಚಿತ್ರದ ಬಿಡುಗಡೆ ದಿನಾಂವನ್ನು ಘೋಷಿಸಲಾಗಿದೆ. 2023ರ ಸೆಪ್ಟೆಂಬರ್ 28 ರಂದು ಚಿತ್ರ ವಿಶ್ವಾದ್ಯಂತ ತೆರೆ ಕಾಣಲಿದೆ.
ಚಿತ್ರದ ಹೊಸ ಪೋಸ್ಟರ್ ಅನ್ನು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿರುವ ಹೊಂಬಾಳೆ ಫಿಲ್ಮ್ಸ್ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಪ್ರಭಾಸ್ ಕೂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಪೋಸ್ಟರ್ ಜೊತೆಗೆ, “#TheEraOfSalaarBegins. 2023 ರ ಸೆಪ್ಟೆಂಬರ್‌ 28 ರಂದು ಚಿತ್ರಮಂದಿರಗಳಲ್ಲಿ ನಾವು ನಿಮ್ಮನ್ನು ಬೇಟಿಯಾಗುತ್ತೇವೆ ಎಂದು ಬರೆದಿದ್ದಾರೆ.

 

ಸಲಾರ್ ಒಂದು ಔಟ್-ಅಂಡ್-ಔಟ್ ಮಾಸ್ ಆಕ್ಷನ್ ಮತ್ತು ಸಾಹಸಮಯ ಚಿತ್ರವಾಗಿದ್ದು, ಇದನ್ನು ಭಾರತ, ಯುರೋಪ್, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಈ ಚಿತ್ರದಲ್ಲಿ ಕೆಜಿಎಫ್ ಸ್ಟಾರ್ ಯಶ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇದೆ.
ಸಲಾರ್ ಚಿತ್ರದಲ್ಲಿ ಪ್ರಭಾಸ್ ಗೆ ಜೋಡಿಯಾಗಿ ಶ್ರುತಿ ಹಾಸನ್ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಮಳೆಯಾಳಂನ ಸ್ಟಾರ್‌ ನಟ ಪೃಥ್ವಿರಾಜ್ ಸುಕುಮಾರನ್ ಕೂಡ ಇದ್ದಾರೆ. ಜೊತೆಗೆ ಖ್ಯಾತ ನಟರಾದ ಜಗಪತಿ ಬಾಬು, ಮಧು ಗುರುಸ್ವಾಮಿ ಮತ್ತು ಈಶ್ವರಿ ರಾವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಸಲಾರ್ ಹೊರತಾಗಿ ಪ್ರಭಾಸ್ ಕೈಯ್ಯಲ್ಲಿ ಆದಿಪುರುಷ ಮತ್ತು ಪ್ರಾಜೆಕ್ಟ್ ಕೆ ಚಿತ್ರಗಳಿವೆ. ರಾಮಾಯಣವನ್ನು ಆಧರಿಸಿದ ಆದಿಪುರುಷ್‌ ಚಿತ್ರವನ್ನು ಓಂ ರೌತ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಸೈಫ್ ಅಲಿ ಖಾನ್ ಮತ್ತು ಕೃತಿ ಸನೋನ್ ನಟಿಸಿದ್ದಾರೆ. ಚಿತ್ರವು ಮುಂದಿನ ವರ್ಷ ಜನವರಿ 12 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here