ಹೊಸದಿಗಂತ ಡಿಜಿಟಲ್ ಡೆಸ್ಕ್
ಮೇಷ
ಕಾರ್ಯಸಿದ್ಧಿ. ಹೆಚ್ಚು ಹಣ ಸಂಪಾದಿಸುವ ಅವಕಾಶ ಲಭ್ಯ. ಅದನ್ನು ಸದುಪಯೋಗ ಮಾಡಿಕೊಳ್ಳಿ. ಸಣ್ಣ ಪುಟ್ಟ ಹಿನ್ನಡೆಗಳಿಗೆ ಎದೆಗುಂದದಿರಿ.
ವೃಷಭ
ಎಲ್ಲ ಕ್ಷೇತ್ರಗಳಲ್ಲೂ ಇಂದು ನಿಮಗೆ ಸಫಲ ದಿನ. ಅದನ್ನು ಸದ್ಬಳಕೆ ಮಾಡಿಕೊಳ್ಳಿ. ನಿಮ್ಮನ್ನು ವಿರೋಧಿಸುವವರು ಸೋಲು ಕಾಣುತ್ತಾರೆ. ಆರ್ಥಿಕ ಲಾಭ.
ಮಿಥುನ
ಹಣಕ್ಕೆ ಸಂಬಂಧಿಸಿ ವಿವೇಕದಿಂದ ನಡಕೊಳ್ಳಿ. ಸಿಕ್ಕಾಬಟ್ಟೆ ಖರ್ಚು ಮಾಡಲು ಹೋಗದಿರಿ. ಪ್ರೀತಿಯ ವಿಷಯದಲ್ಲಿ ನಿಮಗೆ ಪೂರಕ ಬೆಳವಣಿಗೆ.
ಕಟಕ
ಹಣದ ವಿಷಯದಲ್ಲಿ ಶಿಸ್ತು ಕಾಯ್ದುಕೊಳ್ಳಿ. ಅನಿರೀಕ್ಷಿತ ನಷ್ಟ ಸಂಭವಿಸಬಹುದು. ಕುಟುಂಬದ ಹಿರಿಯರ ಜತೆ ಆತ್ಮೀಯ ಕಾಲಕ್ಷೇಪ.
ಸಿಂಹ
ಅನಿರೀಕ್ಷಿತ ಬೆಳವಣಿಗೆ ಸಂಭವಿಸಬಹುದು. ಅದು ನಿಮಗೆ ಪೂರಕವೇ ಆಗಿರುವುದು. ಆರ್ಥಿಕ ಲಾಭ. ಕುಟುಂಬ ಸದಸ್ಯರಿಗೂ ನಿಮ್ಮ ಸಮಯ ಮೀಸಲಿಡಿ.
ಕನ್ಯಾ
ನಿಮಗೆ ಸಮಸ್ಯೆ ತಂದೊಡ್ಡುತ್ತಿದ್ದ ವಿಷಯವು ಇಂದು ಇತ್ಯರ್ಥ ಆಗುವುದು. ಇದರಿಂದ ಮನಸ್ಸಿಗೆ ನಿರಾಳತೆ. ಕೌಟುಂಬಿಕ ಸಹಕಾರ.
ತುಲಾ
ನಿಮ್ಮ ಹಿಂದಿನ ಕಾರ್ಯವೊಂದು ಕೆಲವರಿಂದ ಟೀಕೆಗೆ ಗುರಿಯಾಗಬಹುದು. ಆದರೆ ಬಳಿಕ ಎಲ್ಲವೂ ಸರಿಯಾಗಲಿದೆ. ಪ್ರೀತಿಯಲ್ಲಿ ಯಶಸ್ಸು.
ವೃಶ್ಚಿಕ
ಮನೆಯ ವ್ಯವಹಾರಗಳಿಗೆ ಹೆಚ್ಚು ಆದ್ಯತೆ ಕೊಡಿ. ಇಲ್ಲವಾದರೆ ಸಣ್ಣ ಸಮಸ್ಯೆ ದೊಡ್ಡದಾಗಿ ಬೆಳೆದೀತು. ಅವಶ್ಯ ಸಹಾಯ ಪಡೆಯಿರಿ. ಮಾನಸಿಕ ಉದ್ವಿಗ್ನತೆ ನಿಯಂತ್ರಿಸಿ.
ಧನು
ನಿಮ್ಮ ಆತ್ಮವಿಶ್ವಾಸವು ಯಾವುದೇ ಕೆಲಸವನ್ನು ಸಫಲವಾಗಿ ಮುಗಿಸಲು ನೆರವೀಯುವುದು. ನಿಮಗೆ ಇಷ್ಟವಾದ ವ್ಯಕ್ತಿಯನ್ನು ಭೇಟಿ ಆಗುವ ಅವಕಾಶ.
ಮಕರ
ಪ್ರೀತಿಪಾತ್ರರ ಜತೆ ಭಿನ್ನಾಭಿಪ್ರಾಯ ಉಂಟಾದೀತು. ಅದು ವಿಕೋಪಕ್ಕೆ ಹೋಗಲು ಅವಕಾಶ ಕೊಡದಿರಿ. ಸ್ವಾರ್ಥಿ ವ್ಯಕ್ತಿಗಳಿಂದ ದೂರವಿರಿ.
ಕುಂಭ
ವೃತ್ತಿ ಕ್ಷೇತ್ರದಲ್ಲಿ ವ್ಯಕ್ತಿಯೊಬ್ಬರು ನಿಮಗೆ ಹೆಚ್ಚು ಆಪ್ತರಾಗುತ್ತಾರೆ. ಇತರರ ಜತೆ ಉತ್ತಮ ಸಂವಹನ. ನಿಮ್ಮ ಉದ್ದೇಶ ಈಡೇರುವ ಸಾಧ್ಯತೆ.
ಮೀನ
ವೃತ್ತಿ ಕ್ಷೇತ್ರದ ಒತ್ತಡಗಳು ನಿವಾರಣೆ. ಎಲ್ಲ ಕೆಲಸ ಸುಗಮ. ಉದ್ಯಮಿಗಳಿಗೆ ಧನಲಾಭ. ಸಾಹಸ ಕಾರ್ಯಕ್ಕೆ ಧುಮುಕುವ ಪ್ರೇರಣೆ.