ಹೊಸದಿಗಂತ ಡಿಜಿಟಲ್ ಡೆಸ್ಕ್
21 ವರ್ಷದ ಮಹಿಳಾ ಸ್ನೇಹಿತೆಯ ಆಜ್ಞೆಯ ಮೇರೆಗೆ 11 ವರ್ಷದ ಬಾಲಕಿಯ ಮೇಲೆ ಮೂವರು ಯುವಕರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಮುಂಬೈನ ವಿರಾರ್ ಪರದೇಶದಲ್ಲಿ ನಡೆದಿದೆ.
ಕಳೆದ ಮಂಗಳವಾರ ಸಂಜೆ 7 ಗಂಟೆ ಸುಮಾರಿಗೆ ಅಪ್ರಾಪ್ತೆ ತನ್ನ ಸೆಲ್ ಫೋನ್ ರಿಪೇರಿ ಮಾಡಲು ತನ್ನ ಮನೆಯ ಸಮೀಪದ ಅಂಗಡಿಯೊಂದಕ್ಕೆ ಹೋಗಿದ್ದಳು. ಅಲ್ಲಿ ಆಕೆಗೆ 21 ವರ್ಷದ ಸ್ನೇಹಿತೆ ಭೇಟಿಯಾಗಿದ್ದಾಳೆ. ಆ ಬಳಿಕ ಅವರು ವಿಹಾರಕ್ಕೆಂದು ಹೋಗಿದ್ದಾರೆ.
ಸ್ನೇಹಿತೆ ಬಾಲಕಿಯನ್ನು ವಿರಾರ್ ನ ಹೊರಭಾಗಕ್ಕೆ ಕರೆದೊಯ್ದಿದ್ದಾಳೆ. ಆ ಬಳಿಕ ಅಲ್ಲಿಗೆ ಯುವತಿ ತನ್ನ ಸ್ನೇಹಿತರನ್ನು ಕರೆಸಿಕೊಂಡಿದ್ದಾಳೆ. ಮಧ್ಯರಾತ್ರಿ ವೇಳೆಗೆ ಗಣೇಶ ಹಬ್ಬಕ್ಕೆ ಹಾಕಲಾಗಿದ್ದ ಪೆಂಡಾಲ್ನ ಹಿಂದಿನ ಸ್ಥಳಕ್ಕೆ ಬಾಲಕಿಯನ್ನು ಕರೆದುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಹುಡುಗಿಯ ಸ್ನೇಹಿತ ಆಕೆಗೆ ಒಬ್ಬ ವ್ಯಕ್ತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಕೇಳಿದ್ದಾನೆ. ಆಕೆ ಒಪ್ಪದಿದ್ದಾಗ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ.ಸಂತ್ರಸ್ತೆಯ ಸ್ನೇಹಿತೆ ಆಕೆಯ ಮೇಲೆ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯವನ್ನು ಅಲ್ಲಿಯೇ ವೀಕ್ಷಿಸಿದ್ದಾಳೆ. ಬುಧವಾರ ಮುಂಜಾನೆ 5 ಗಂಟೆ ಸುಮಾರಿಗೆ ಆಕೆಯನ್ನು ಆಕೆಯ ಮನೆಯ ಬಳಿ ಬಿಟ್ಟು ಹೋಗಿದ್ದಾರೆ.
ಬಾಲಕಿ ಮನೆಗೆ ಬಂದು ಲೈಂಗಿಕ ದೌರ್ಜನ್ಯದ ಬಗ್ಗೆ ಹೇಳಿದ್ದಾಳೆ. ಆಕೆಯ ತಾಯಿ ವಿರಾರ್ ಪೊಲೀಸಗೆಡ ದೂರು ನೀಡಿದ್ದಾರೆ. ಪೊಲೀಸರು ಮೂರು ಗಂಟೆಯಲ್ಲಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಆರೋಪಿಗಳಲ್ಲಿ ಒಬ್ಬರು ಕಾಲೇಜು ವಿದ್ಯಾರ್ಥಿಯಾಗಿದ್ದರೆ, ಮತ್ತೊಬ್ಬ ತರಕಾರಿ ವ್ಯಾಪಾರಿ, ಇಬ್ಬರೂ ವಿರಾರ್ ನಿವಾಸಿಗಳು. ಮೂರು ಗಂಟೆಗಳಲ್ಲಿ ಅವರನ್ನು ಬಂಧಿಸಲಾಯಿತು. ಡ್ರಗ್ಸ್ ಡೀಲರ್ ಎಂದು ನಂಬಲಾಗಿರುವ ಮೂರನೇ ಪುರುಷ ಆರೋಪಿಗಾಗಿ ಶೋಧ ಆರಂಭಿಸಲಾಗಿದೆ.
ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಅಸ್ವಾಭಾವಿಕ ಲೈಂಗಿಕತೆ ಮತ್ತು ಪೋಕ್ಸೊ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ