ಟಾಟಾ ಮೋಟಾರ್ಸ್‌ನಿಂದ ಬಿಎಂಟಿಸಿಗೆ ಪೂರೈಕೆಯಾಗಲಿದೆ 921 ಎಲೆಕ್ಟ್ರಿಕ್ ಬಸ್‌ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಟಾಟಾ ಮೋಟಾರ್ಸ್ ಗುರುವಾರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) 921 ಎಲೆಕ್ಟ್ರಿಕ್ ಬಸ್‌ಗಳನ್ನು ಪೂರೈಸುವ ಆದೇಶವನ್ನು ಪಡೆದುಕೊಂಡಿದೆ. ಇದು ಬೆಂಗಲೂರಿಗರ ಪಾಲಿಗ ಶುಭಸುದ್ದಿಯಾಗಿದ್ದು ಮಾಲಿನಯ ರಹಿತ ವಾತಾವರಣ ನಿರ್ಮಿಸುವಲ್ಲಿ ಎಲೆಕ್ಟ್ರಿಕ್‌ ಬಸ್‌ ಗಳು ಉತ್ತಮ ಕೊಡುಗೆ ನೀಡಲಿವೆ.

ಒಪ್ಪಂದದ ಪ್ರಕಾರ 12 ಮೀಟರ್ ಟಾಟಾ ಸ್ಟಾರ್‌ಬಸ್ ಬಸ್‌ ಗಳನ್ನು ಟಾಟಾ ಮೋಟರ್ಸ್‌ ಪೂರೈಕೆ ಮಾಡಲಿದ್ದು ಮುಂದಿನ 12 ವರ್ಷಗಳ ಅವಧಿಗೆ ಅದರ ನಿರ್ವಹಣೆಯ ಜವಾಬ್ದಾರಿಯನ್ನೂ ಹೊತ್ತುಕೊಂಡಿದೆ. ಟಾಟಾ ಸ್ಟಾರ್‌ಬಸ್ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ವಾಹನವಾಗಿದ್ದು, ಸುಸ್ಥಿರ ಮತ್ತು ಆರಾಮದಾಯಕ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ.

ಕಳೆದ ಒಂದು ತಿಂಗಳಲ್ಲಿ ಟಾಟಾ ಮೋಟಾರ್ಸ್ ರಾಜ್ಯ ಸರ್ಕಾರದಿಂದ ಪಡೆದ ಮೂರನೇ ಅತಿ ದೊಡ್ಡ ಆರ್ಡರ್ ಇದಾಗಿದೆ. ಇದಕ್ಕೂ ಮೊದಲು, ದೆಹಲಿ ಸಾರಿಗೆ ನಿಗಮದಿಂದ (ಡಿಟಿಸಿ) 1,500 ಎಲೆಕ್ಟ್ರಿಕ್ ಬಸ್‌ಗಳಿಗೆ ಮತ್ತು ಪಶ್ಚಿಮ ಬಂಗಾಳ ಸಾರಿಗೆ ಸಂಸ್ಥೆಯಿಂದ (ಡಬ್ಲ್ಯುಬಿಟಿಸಿ) 1,180 ಎಲೆಕ್ಟ್ರಿಕ್ ಬಸ್‌ಗಳಿಗೆ ಟಾಟಾ ಮೋಟಾರ್ಸ್ ಆರ್ಡರ್ ಪಡೆದಿತ್ತು.

ಟಾಟಾ ಮೋಟಾರ್ಸ್‌ನ ಉಪಾಧ್ಯಕ್ಷ ರೋಹಿತ್ ಶ್ರೀವಾಸ್ತವ ಮಾತನಾಡಿ, ಭವಿಷ್ಯದ ಚಲನಶೀಲತೆಯ ಅಗತ್ಯಗಳನ್ನು ಪೂರೈಸುವ ಮೂಲಕ ಸ್ಮಾರ್ಟ್, ಆಧುನಿಕ ಮತ್ತು ಇಂಧನ ದಕ್ಷ ವಾಣಿಜ್ಯ ಪ್ರಯಾಣಿಕ ವಾಹನಗಳನ್ನು ಅಭಿವೃದ್ಧಿಪಡಿಸುವಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ಈ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳು ಬೆಂಗಳೂರಿನ ನಿವಾಸಿಗಳಿಗೆ ಪ್ರಯೋಜನಕಾರಿಯಾಗಲಿವೆ ಎಂಬ ವಿಶ್ವಾಸ ನಮಗಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!