ಕೋಪದಲ್ಲಿ ಪ್ರಿಯತಮೆ ಬ್ಯಾಗ್​​ನೊಳಗೆ ಮೂತ್ರ ವಿಸರ್ಜಿಸಿದ ಬಾಯ್‌ ಫ್ರೆಂಡ್‌ಗೆ ಬಿತ್ತು 90,000 ಫೈನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ತನ್ನ ಗೆಳತಿಯ ಲೂಯಿ ವಿಟಾನ್ ಬ್ಯಾಗ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿದ ಬಾಯ್‌ ಫ್ರೆಂಡ್‌ಗೆ‌ ಶಿಕ್ಷೆಯಾಗಿ ದಕ್ಷಿಣ ಕೊರಿಯಾದ ಕೋರ್ಟ್ 1.5 ಮಿಲಿಯನ್ ದಕ್ಷಿಣ ಕೊರಿಯನ್ ವನ್ (ರೂ. 90,000) ಪಾವತಿಸಲು ಆದೇಶಿಸಿದೆ.
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ದಕ್ಷಿಣ ಕೊರಿಯಾದ ಸಿಯೋಲ್‌ನ 31 ವರ್ಷದ ವ್ಯಕ್ತಿಯೊಬ್ಬ ತನ್ನ ಗೆಳತಿಯೊಂದಿಗೆ ಜಗಳವಾಡಿದ್ದಾನೆ.
ಯುವತಿ ಯದ್ವಾತದ್ವ ಹಣವನ್ನು ಖರ್ಚು ಮಾಡುತ್ತಿದ್ದಾಳೆ ಮತ್ತು ಅವಳಿಂದ ಹೆಚ್ಚುತ್ತಿರುವ ಸಾಲದ ಬಗ್ಗೆ ಆತ ಕುಪಿತಗೊಂಡಿದ್ದ. ಜಗಳದ ಸಮಯದಲ್ಲಿ ಒಂದು ಹಂತದಲ್ಲಿ, ಆತ ಬೆಡ್‌ ರೂಂಗೆ ಹೋಗಿ ತನ್ನ ಗೆಳತಿಯ ಲಕ್ಷಾಂತರ ರುಪಾಯಿ ಬೆಲೆಬಾಳುವ ಲೂಯಿ ವಿಟಾನ್ ಬ್ಯಾಗ್‌ ಅನ್ನು ಅಲ್ಲಿಗೆ ತಂದು ಪ್ಯಾಂಟ್ ಬಿಚ್ಚಿ ಅವಳ ಎದುರಿಗೆ ಮೂತ್ರ ವಿಸರ್ಜನೆ ಮಾಡತೊಡಗಿದ.
ಇದರಿಂದ ಕೋಪಗೊಂಡ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ವಿಚಾರಣೆ ವೇಳೆ ಆತ ಆಕೆಯ ಆರೋಪಗಳನ್ನು ನಿರಾಕರಿಸಿದ್ದಾನೆ. ಸಿಟ್ಟಿನ ಭರದಲ್ಲಿ ಬ್ಯಾಗ್‌ ಒಳಕ್ಕೆ ಮೂತ್ರ ವಿಸರ್ಜಿಸಉವಂತೆ ನಟಿಸಿದ್ದೆ. ಆದರೆ ನಿಜವಾಗಿಯೂ ಹಾಗೆ ಮಾಡಿರಲಿಲ್ಲ ಎಂದು ಅಧಿಕಾರಿಗಳಿಗೆ ಹೇಳಿದ್ದ. ಆದಾಗ್ಯೂ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫೋರೆನ್ಸಿಕ್ ಸೈನ್ಸಸ್ ಬ್ಯಾಗ್‌ನ ಒಳಭಾಗದಿಂದ ಮಾದರಿಗಳನ್ನು ಪರೀಕ್ಷಿಸಿದಾಗ ಮೂತ್ರದ ಅಂಶಗಳು ಪತ್ತೆಯಾಗಿವೆ. ಆತ ಕೋಪ ಇಳಿದ ಬಳಿಕ ಬಳಿಕ ಬ್ಯಾಗ್‌ನೊಳಗೆ ಡಿಯೋಡರೆಂಟ್ ಸುರಿದು ತನ್ನ ಕೃತ್ಯವನ್ನು ಮುಚ್ಚಿಡಲು ಯತ್ನಿಸಿದ್ದ.
ಪರೀಕ್ಷೆಯ ಫಲಿತಾಂಶಗಳಲ್ಲಿ ಮನುಷ್ಯನ ಡಿಎನ್ಎಗೆ ಹೊಂದಿಕೆಯಾಗಿದೆ. ಹಾಳಾದ ಡಿಸೈನರ್ ಹ್ಯಾಂಡ್‌ಬ್ಯಾಗ್‌ಗೆ ಪರಿಹಾರವಾಗಿ ತನ್ನ ಗೆಳತಿಗೆ 1.5 ಮಿಲಿಯನ್ ಹಣವನ್ನು ಪಾವತಿಸಲು ನ್ಯಾಯಾಲಯವು ಬಾಯ್‌ ಪ್ರೆಂಡ್‌ ಗೆ ಆದೇಶಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!