ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಹಳ್ಳಿಯೊಂದರಲ್ಲಿ ಕೈಪಂಪ್ ಒಳಗಿಂದ ನೀರಿನ ಜೊತೆ ಬೆಂಕಿ ಹೊರಬರುತ್ತಿದೆ. ಈ ಘಟನೆ ಕಂಡು ಸ್ಥಳೀಯರು ಅಚ್ಚರಿಗೊಂಡಿದ್ದಾರೆ. ನೀರಿನ ಪಂಪ್ನಿಂದ ಬೆಂಕಿ ಬರುತ್ತಿರುವುದನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳಿಂದ ಜನರ ದಂಡೇ ಸೇರಿದೆ.
ಈ ವಿಚಿತ್ರ ಘಟನೆ ನಡೆದಿರುವುದು ಮಧ್ಯಪ್ರದೇಶ ರಾಜ್ಯದ ಕುಚ್ಚರ್ ಗ್ರಾಮದಲ್ಲಿ. ಛತ್ತರ್ಪುರ ಜಿಲ್ಲಾ ಕೇಂದ್ರದಿಂದ ಬಕ್ಷವಾ ಪಂಚಾಯತ್ ಹತ್ತು ಕಿಲೋಮೀಟರ್ ದೂರದಲ್ಲಿದೆ. ಗ್ರಾಮದಲ್ಲಿ ನೀರಿಗಾಗಿ ಬೋರ್ ಕೊರೆಸಲಾಗಿದೆ. ಆದರೆ ಕೆಟ್ಟುಹೋಗಿದ್ದಕ್ಕೆ ಅದರ ಮುಚ್ಚಳ ತೆಗೆದುಹಾಕಲಾಗಿತ್ತು.
ಇದೀಗ ಆ ಬೋರ್ವೆಲ್ನಿಂದ ನೀರಿನೊಂದಿಗೆ ಭೂಮಿಯಿಂದ ಬೆಂಕಿಯು ಹೊರಬರುತ್ತಿದೆ. ಇದನ್ನು ಕಂಡು ಬೆಚ್ಚಿಬಿದ್ದ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
Hand pump spewing fire and water in Kachhar village, Buxwaha,Villagers have informed the concerned officials.Local administration is sending a team to spot @ndtv @ndtvindia pic.twitter.com/CWKK2Gz2lE
— Anurag Dwary (@Anurag_Dwary) August 25, 2022