ನೀರಿನೊಂದಿಗೆ ಬೆಂಕಿ ಉಗುಳುತ್ತಿರುವ ಬೋರ್‌ವೆಲ್:‌ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಧ್ಯಪ್ರದೇಶದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಹಳ್ಳಿಯೊಂದರಲ್ಲಿ ಕೈಪಂಪ್‌ ಒಳಗಿಂದ ನೀರಿನ ಜೊತೆ ಬೆಂಕಿ ಹೊರಬರುತ್ತಿದೆ. ಈ ಘಟನೆ ಕಂಡು ಸ್ಥಳೀಯರು ಅಚ್ಚರಿಗೊಂಡಿದ್ದಾರೆ. ನೀರಿನ ಪಂಪ್‌ನಿಂದ ಬೆಂಕಿ ಬರುತ್ತಿರುವುದನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳಿಂದ ಜನರ ದಂಡೇ ಸೇರಿದೆ.

ಈ ವಿಚಿತ್ರ ಘಟನೆ ನಡೆದಿರುವುದು ಮಧ್ಯಪ್ರದೇಶ ರಾಜ್ಯದ ಕುಚ್ಚರ್ ಗ್ರಾಮದಲ್ಲಿ. ಛತ್ತರ್‌ಪುರ ಜಿಲ್ಲಾ ಕೇಂದ್ರದಿಂದ ಬಕ್ಷವಾ ಪಂಚಾಯತ್ ಹತ್ತು ಕಿಲೋಮೀಟರ್ ದೂರದಲ್ಲಿದೆ. ಗ್ರಾಮದಲ್ಲಿ ನೀರಿಗಾಗಿ ಬೋರ್‌ ಕೊರೆಸಲಾಗಿದೆ. ಆದರೆ ಕೆಟ್ಟುಹೋಗಿದ್ದಕ್ಕೆ ಅದರ ಮುಚ್ಚಳ ತೆಗೆದುಹಾಕಲಾಗಿತ್ತು.

ಇದೀಗ ಆ ಬೋರ್‌ವೆಲ್‌ನಿಂದ ನೀರಿನೊಂದಿಗೆ ಭೂಮಿಯಿಂದ ಬೆಂಕಿಯು ಹೊರಬರುತ್ತಿದೆ. ಇದನ್ನು ಕಂಡು ಬೆಚ್ಚಿಬಿದ್ದ ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!