ಹೊಸದಿಗಂತ ಡಿಜಿಟಲ್ ಡೆಸ್ಕ್:
ಹತ್ತು ವರ್ಷದ ಬಾಲಕನೊಬ್ಬ ತನ್ನ ಎರಡು ವರ್ಷದ ತಮ್ಮನ ಮೃತ ದೇಹವನ್ನು ಆಂಬುಲೆನ್ಸ್ ದೊರಕದೆ ತನ್ನ ತೋಳಿನಲ್ಲಿ ಹೊತ್ತುಕೊಂಡು ಹೋಗುತ್ತಿದ್ದ ವಿಡೀಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೃತದೇಹವನ್ನು ಸಾಗಿಸಲು ವಾಹನ ಒದಗಿಸುವಂತೆ ಅರೋಗ್ಯಾಧಿಕಾರಿಗೆ ಬಾಲಕನ ತಂದೆ ಮನವಿ ಮಾಡಿದ್ದಾರೆ. ಆದರೆ ಅಧಿಕಾರಿಗಳು ಈ ಬಗ್ಗೆ ಆಸಕ್ತಿ ತೋರಲಿಲ್ಲ. ಹೀಗಾಗಿ ಶವವನ್ನು ಹೊತ್ತುಕೊಂಡು ಹೋಗಿದ್ದಾರೆ ಎಂದು ಪ್ರವೀಣ್ ಸಂಬಂಧಿ ರಾಂಪಲ್ ಹೇಳಿದ್ದಾರೆ.
ನಿರಂತರವಾಗಿ ಅಳುತ್ತಿದ್ದ ಕಾರಣಕ್ಕೆ ಮಲ ತಾಯಿ ಸೀತಾ ಪುಟ್ಟ ಮಗು ಕಲಾಕುಮಾರ್‌ನನ್ನು ದಿಲ್ಲಿ- ಸಹರಾನ್‌ಪುರ ಹೆದ್ದಾರಿಗೆ ಎಸೆದಿದ್ದಾರೆ. ಮಗುವಿನ ಮೇಲೆ ಕಾರು ಹರಿದ ಪರಿಣಾಮ ಮಗು ಮೃತ ಪಟ್ಟಿತ್ತು. ಶವ ಪರೀಕ್ಷೆಯ ನಂತರ ಮಗುವನ್ನು ತಂದೆಗೆ ಹಸ್ತರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.