ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಸರಗೋಡು ಜಿಲ್ಲೆಯಾದ್ಯಂತ ಮಳೆ ಆರ್ಭಟ ಮುಂದುವರಿದಿದ್ದು, ಮಧುವಾಹಿನಿ ನದಿ ಮತ್ತೆ ಉಕ್ಕಿ ಹರಿದು ಮಧೂರು ಶ್ರೀ ಮದನಂತೇಶ್ವರ ಸಿದ್ದಿ ವಿನಾಯಕ ದೇವಸ್ಥಾನದ ಮುಂಭಾಗಕ್ಕೆ ಮತ್ತೆ ನೀರು ಪ್ರವೇಶಿಸಿದೆ.
ಮಳೆಯಾರ್ಭಟ ತೀವ್ರಗೊಳ್ಳುತ್ತಿರುವಂತೆಯೇ ಹಾನಿ ನಷ್ಟಗಳೂ ವರದಿಯಾಗುತ್ತಿವೆ. ಜಿಲ್ಲೆಯ ಮುನ್ನಾಡು, ಮುಳಿಯಾರು, ಬೇಡಡ್ಕ ಗ್ರಾಮಗಳ ವಿವಿಧೆಡೆ ಮಳೆಗೆ ಪ್ರವಾಹ ಹಾಗೂ ಭೂಕುಸಿತ ಕಾಣಿಸಿಕೊಂಡಿದ್ದು, ಹಲವು ಮನೆಗಳಿಗೆ ಹಾನಿಯಾಗಿದೆ.
ಮಳೆ ಮತ್ತಷ್ಟು ಮುಂದುವರಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಎಲ್ಲೆಡೆ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.