ಉಗಾಂಡದಲ್ಲಿ ಭಾರೀ ಮಳೆಗೆ ಭೂಕುಸಿತ: ಮಹಿಳೆಯರು, ಮಕ್ಕಳು ಸೇರಿದಂತೆ 15 ಜನರು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಭಾರೀ ಮಳೆಯಿಂದ ಜರ್ಜರಿತವಾಗಿರುವ ಉಗಾಂಡಾ ದೇಶದ ಪಶ್ಚಿಮ ಭಾಗದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 15 ಜನರು ಸಾವನ್ನಪ್ಪಿದ್ದಾರೆ ಎಂದು ರೆಡ್‌ಕ್ರಾಸ್ ಸಂಸ್ಥೆ ತಿಳಿಸಿದೆ.
ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಗಡಿಯಲ್ಲಿರುವ ಕಾಸೆಸೆ ಪಟ್ಟಣದಲ್ಲಿ ಸಂಭವಿಸಿದ ದುರಂತವು ಸಾಕಷ್ಟು ಸಂಖ್ಯೆಯ ಜನರನ್ನು ಕಾಣೆಯಾಗಿಸಿದೆ ಮತ್ತು ಹಲವಾರು ಮನೆಗಳನ್ನು ನಾಶಪಡಿಸಿದೆ.
“ಈಗ 15 ಮೃತದೇಹಗಳು ದೇಹಗಳು ಪತ್ತೆಯಾಗಿವೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಮತ್ತಷ್ಟು ಜನರು ಸಾವನ್ನಪ್ಪಿರುವ ಶಂಕೆಯಿದೆ ಎಂದು ರೆಡ್‌ಕ್ರಾಸ್ ವಕ್ತಾರ ಐರಿನ್ ನಕಾಸಿಟಾ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಾಪತ್ತೆಯಾದವರ ನಿಖರ ಸಂಖ್ಯೆ ತಿಳಿದಿಲ್ಲ, ಆದರೆ ಆರು ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ನಕಾಸಿಟಾ ಹೇಳಿದರು. ರೆಡ್‌ಕ್ರಾಸ್‌ನಿಂದ ಹಂಚಿಕೊಂಡಿರುವ ಭೀಕರ ಛಾಯಾಚಿತ್ರಗಳಲ್ಲಿ ಕುಸಿದ ಮನೆಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಹಲವು ದೇಹಗಳನ್ನು ಕಾಣಬಹುದು.
ಕಳೆದ ಶುಕ್ರವಾರ ನೆರೆಯ ಜಿಲ್ಲೆಯ ಬುಂಡಿಬುಗ್ಯೊದಲ್ಲಿ ಭಾರೀ ಮಳೆಯಿಂದಾಗಿ ಮೂರು ಜನರು ಸಾವನ್ನಪ್ಪಿ ಮತ್ತು ಹಲವರು ಗಾಯಗೊಂಡಿದ್ದರು.
0ಜುಲೈ ಅಂತ್ಯದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಿಂದ ಪೂರ್ವ ಉಗಾಂಡಾದ ಪಟ್ಟಣವಾದ ಮಾಬ್ಲೇ ಯಲ್ಲಿ ಕನಿಷ್ಠ 22 ಜನರು ಸಾವನ್ನಪ್ಪಿದ್ದರು. ಇದರಿಂದ ನೂರಾರು ನಿವಾಸಿಗಳು ನಿರಾಶ್ರಿತರಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!