ಬೆಂಗಳೂರಲ್ಲಿ ಯಾವೆಲ್ಲಾ ಶ್ರೀಮಂತರ ಮನೆ ಮುಳುಗಿದೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೆಂಗಳೂರಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉಂಟಾಗಿರುವ ಪ್ರವಾಹ ಸಿಲಿಕಾನ್ ಸಿಟಿಯಲ್ಲಿ ವಾಸಿಸುವವರ ಜೀವನವನ್ನು ಹಾಳುಮಾಡಿದೆ. ಬಡವರು-ಸಿರಿವಂತರೆನ್ನದೆ ಎಲ್ಲರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಉಳ್ಳವರು ಇಲ್ಲದವರು ಎಲ್ಲರನ್ನು ಈ ಮಹಾಮಳೆ ಒಂದೇ ತಕ್ಕಡಿಯಲ್ಲಿ ತೂಗು ಹಾಕಿದೆ. ಬಡವರು ಪರಿಸ್ಥಿತಿಯ ಭಾರವನ್ನು ಸಹಿಸಬೇಕಾಗಿದ್ದರೂ, ಶ್ರೀಮಂತರಿಗೂ ಸಹ ಈ ಕಷ್ಟ ತಪ್ಪಿಲ್ಲ. ಸಾಮಾನ್ಯ ಜನರಂತೆ ಬಿಲಿಯನೇರ್‌ಗಳನ್ನೂ ಸಹ ಬೋಟ್‌ ಹಾಗೂ ಟ್ರ್ಯಾಕ್ಟರ್‌ಗಳ ಮೂಲಕ ರಕ್ಷಣೆ ಮಾಡಲಾಗಿದೆ.

ವಿಪ್ರೋ ಅಧ್ಯಕ್ಷ ರಿಷಾದ್ ಪ್ರೇಮ್‌ಜಿ, ಬ್ರಿಟಾನಿಯಾ ಸಿಇಒ ವರುಣ್ ಬೆರ್ರಿ, ಬಿಗ್ ಬಾಸ್ಕೆಟ್ ಸಹ-ಸಂಸ್ಥಾಪಕ ಅಭಿನಯ್ ಚೌಧರಿ ಮತ್ತು ಬೈಜೂಸ್ ಸಹ-ಸಂಸ್ಥಾಪಕ ಬೈಜು ರವೀಂದ್ರನ್ ಸೇರಿದಂತೆ ಬಿಲಿಯನೇರ್‌ಗಳಿಗೆ ನೆಲೆಯಾಗಿರುವ‌ ಎಪ್ಸಿಲಾನ್ ಗೇಟೆಡ್ ಕೂಡಾ ಪ್ರವಾಹಕ್ಕೆ ಸಿಲುಕಿದೆ. ಪ್ರವಾಹದ ನೀರಿನಲ್ಲಿ ಬಿಲಿಯನೇರ್‌ಗಳ ಐಶಾರಾಮಿ ಕಾರುಗಳು ತೇಲುತ್ತಿರುವ ವಿಡಿಯೋ ಸಾಮಾಜಿ ಜಾಲತಾಣದಲ್ಲಿ ವೈರಲ್‌ ಆಗಿವೆ.

ಮತ್ತೊಂದು ವಿಚಾರ ನಿಮಗೆ ಗೊತ್ತಾ?..ಎಪ್ಸಿಲಾನ್‌ನಲ್ಲಿರುವ ಮೂಲ ವಿಲ್ಲಾದ ಬೆಲೆ 10 ಕೋಟಿ ರೂಪಾಯಿ ಎಂದು ಖಾಸಗಿ ಸುದ್ದಿಸಂಸ್ಥೆ ವರದಿ ಮಾಡಿದೆ. ಪ್ಲಾಟ್‌ನ ಗಾತ್ರವನ್ನು ಅವಲಂಬಿಸಿ ಬೆಲೆ ಹೆಚ್ಚಾಗಲೂಬಹುದು ಜೊತೆಗೆ ಅಲ್ಲಿ 1 ಎಕರೆ ಜಮೀನಿಗೆ 80 ಕೋಟಿ ರೂಪಾಯಿ ಇದೆಯಂತೆ.

ಅನ್‌-ಅಕಾಡೆಮಿ ಸಿಇಒ ಗೌರವ್ ಮುಂಜಾಲ್ ಅವರ ನಿವಾಸ ಕೂಡ ಪ್ರವಾಹಕ್ಕೆ ಸಿಲುಕಿದ್ದರಿಂದ ಅವರ ಕುಟುಂಬ ಮತ್ತು ಸಾಕು ನಾಯಿಯ ಜೊತೆ ಟ್ರ್ಯಾಕ್ಟರ್‌ನಲ್ಲಿ ಸ್ಥಳಾಂತರಗೊಂಡಿದ್ದಾರೆ ಈ ವೀಡಿಯೊವನ್ನು ಸ್ವತಃ ಅವರೇ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಯಾರಿಗಾದರೂ ಸಹಾಯ ಬೇಕಾದರೆ ಅವರನ್ನು ಸಂಪರ್ಕಿಸುವಂತೆ ಸೂಚಿಸಿದರು. ʻನಾನು ನನ್ನ ಕೈಲಾದಷ್ಟು ಸಹಾಯ ಮಾಡಲು ಪ್ರಯತ್ನಿಸುತ್ತೇನೆʼ ಎಂದು ಮುಂಜಾಲ್ ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!