100 ಪಾಯಿಂಟ್‌ ಏರಿದ ನಿಫ್ಟಿ: ಹೀಗಿದೆ ನೋಡಿ ಇಂದಿನ ಷೇರುಪೇಟೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ತೈಲಬೆಲೆಯಲ್ಲಿ ತೀವ್ರ ಕುಸಿತ ಹಾಗೂ ಧನಾತ್ಮಕ ಜಾಗತಿಕ ಸೂಚನೆಗಳಿಂದಾಗಿ ಭಾರತೀಯ ಷೇರು ಮಾರುಕಟ್ಟೆಯು ಲವಲವಿಕೆಯಿಂದ ತೆರೆದಿವೆ. ಫ್ರಂಟ್‌ಲೈನ್ ಸೂಚ್ಯಂಕಗಳಾದ ನಿಫ್ಟಿ 50ಯು 100 ಪಾಯಿಂಟ್‌ ಏರಿಕೆಯಾಗಿ 17,700 ಮಟ್ಟದಲ್ಲಿ ವಹಿವಾಟು ನಡೆಸಿದರೆ ಎಸ್ & ಪಿ ಬಿಎಸ್‌ಇ ಸೆನ್ಸೆಕ್ಸ್ 450 ಪಾಯಿಂಟ್‌ಗಳಿಗಿಂತ ಹೆಚ್ಚು ಏರಿಕೆ ಕಂಡು 59,513 ಮಟ್ಟದಲ್ಲಿ ವಹಿವಾಟು ನಡೆಸಿದೆ.

ಟೆಕ್ ಮಹೀಂದ್ರಾ, ಏಷ್ಯನ್ ಪೇಂಟ್ಸ್, ಇಂಡಸ್‌ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್ ಷೇರುಗಳು ಅಗ್ರ ವಿಜೇತರಾಗಿ ಹೊರಹೊಮ್ಮಿವೆ.

ನಿಫ್ಟಿ ಮಿಡ್‌ಕ್ಯಾಪ್ 100 ಮತ್ತು ನಿಫ್ಟಿ ಸ್ಮಾಲ್‌ಕ್ಯಾಪ್ 100 ಶೇಕಡಾ 1 ರಷ್ಟು ಏರಿಕೆಯಾಗಿವೆ. ನಿಫ್ಟಿ ಐಟಿ ಮತ್ತು ನಿಫ್ಟಿ ಪಿಎಸ್‌ಯು ಬ್ಯಾಂಕ್ ಸೂಚ್ಯಂಕಗಳು ವ್ಯಾಪಾರವನ್ನು ಮುನ್ನಡೆಸುವುದರೊಂದಿಗೆ ಎಲ್ಲಾ ವಲಯಗಳು ಸಕಾರಾತ್ಮಕ ಪ್ರದೇಶದಲ್ಲಿ ತೆರೆದಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!