ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿಷೇಧಿತ ಭಯೋತ್ಪಾದಕ ಸಂಘಟನೆ ಅನ್ಸರುಲ್ಲಾ ಬಾಂಗ್ಲಾ ತಂಡ (ಎಬಿಟಿ) ಯೊಂದಿಗೆ ಸಂಪರ್ಕ ಹೊಂದಿರುವ ಇಬ್ಬರು ಶಂಕಿತರನ್ನು ಅಸ್ಸಾಂ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಶಂಕಿತ ಉಗ್ರರನ್ನು ಮುಸಾದಿಕ್ ಹುಸೇನ್ ಮತ್ತು ಇಕ್ರಾಮುಲ್ ಇಸ್ಲಾಂ ಎಂದು ಗುರುತಿಸಲಾಗಿದೆ. ಇಕ್ರಮುಲ್ ಒಬ್ಬ ಇಮಾಮ್ ಆಗಿದ್ದು, ನಾಗಾನ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ.
ಮತ್ತೊಂದೆಡೆ, ಮೊರಿಗಾಂವ್ ಜಿಲ್ಲೆಯ ಮೊಯಿರಾಬರಿ ಪ್ರದೇಶದಿಂದ ರಾಜ್ಯ ಪೊಲೀಸರು ಹುಸೇನ್‌ನನ್ನು ಬಂಧಿಸಿದ್ದಾರೆ.
ಬಂಧಿತ ಇಬ್ಬರೂ ನಿಷೇಧಿತ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಮೊರಿಗಾಂವ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅಪರ್ಣಾ ಎನ್. ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಕಳೆದ ತಿಂಗಳು ಧಾರ್ಮಿಕ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಪೊಲೀಸರು ಭಯೋತ್ಪಾದಕ ಘಟಕವನ್ನು ಭೇದಿಸಿದ ನಂತರ ಮೊರಿಗಾಂವ್ ಜಿಲ್ಲಾಡಳಿತವು ಮೊಯಿರಾಬರಿಯಲ್ಲಿನ ಮದರಸಾವನ್ನು ನೆಲಸಮಗೊಳಿಸಿತ್ತು. ಇಲ್ಲಿಯವರೆಗೆ, ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಇಮಾಮ್ ಮತ್ತು ಮದರಸಾ ಶಿಕ್ಷಕರು ಸೇರಿದಂತೆ ಸುಮಾರು 40 ಜನರನ್ನು ಬಂಧಿಸಲಾಗಿದೆ.