ವಿಶ್ವಕಪ್‌ಗೆ ಅಜರುದ್ದೀನ್‌ ಟೀಂ ಸೆಲೆಕ್ಷನ್‌ ನೋಡಿ ಹಿಗ್ಗಾಮುಗ್ಗ ಟ್ರೋಲ್‌ ಮಾಡಿದ ಫ್ಯಾನ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
2022ರ ಟಿ 20 ವಿಶ್ವಕಪ್‌ಗಾಗಿ ಭಾರತ ತಂಡ ಪ್ರಕಟವಾಗಿದೆ. ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮೆಗಾ ಐಸಿಸಿ ಕಾರ್ಯಕ್ರಮಕ್ಕಾಗಿ ಬಿಸಿಸಿಐ 15 ಮಂದಿಯ ತಂಡವನ್ನು ಸೋಮವಾರ ಪ್ರಕಟಿಸಿದೆ. ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಫಿಟ್ನೆಸ್ ಗಳಿಸಿ ತಂಡಕ್ಕೆ ಮರಳಿದ್ದಾರೆ. ಇತ್ತೀಚೆಗೆ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಗಾಯಾಳು ರವೀಂದ್ರ ಜಡೇಜಾ ಟೀಂನಿಂದ ಔಟ್‌ ಆಗಿದ್ದಾರೆ.
ಏಷ್ಯಾ ಕಪ್‌ ತಂಡದಿಂದ ಹೊರಬಿದ್ದ ಏಕೈಕ ಆಟಗಾರ ಅವೇಶ್ ಖಾನ್ ಮಾತ್ರವೇ ಆಗಿದ್ದಾರೆ. ಹಿರಿಯ ಆಟಗಾರ ಮೊಹಮ್ಮದ್ ಶಮಿ ಮುಖ್ಯ ತಂಡಕ್ಕೆ ಪ್ರವೇಶಿಸಲು ವಿಫಲರಾಗಿದ್ದಾರೆ. ಆದಾಗ್ಯೂ, ಅವರನ್ನು ರವಿ ಬಿಷ್ಣೋಯ್, ಶ್ರೇಯಸ್ ಅಯ್ಯರ್ ಮತ್ತು ದೀಪಕ್ ಚಹಾರ್ ಅವರೊಂದಿಗೆ ಸ್ಟ್ಯಾಂಡ್‌ಬೈ ಪಟ್ಟಿಗೆ ಸೇರಿಸಲಾಗಿದೆ.
ತಂಡದ ಆಯ್ಕೆ ಕುರಿತು ಹಲವು ಮಾಜಿ ಕ್ರಿಕೆಟಿಗರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ತಂಡದ ಆಯ್ಕೆಯನ್ನು ಶ್ಲಾಘಿಸಿದರೆ ಕೆಲವರು ʼಸೇರಿಸಬೇಕಿದ್ದʼ ಆಟಗಾರರ ಆಯ್ಕೆಯನ್ನು ಸೂಚಿಸಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರು ಸಹ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು,‌ ಬಿಸಿಸಿಐ ಪ್ರಕಟಿಸಿದ 15 ಜನರ ಪಟ್ಟಿಯಿಂದ ಶಮಿ ಮತ್ತು ಶ್ರೇಯಸ್ ಅಯ್ಯರ್ ಕಾಣೆಯಾಗಿರುವುದನ್ನು ನೋಡಿ ಆಶ್ಚರ್ಯವಾಯಿತು ಎಂದು ಹೇಳಿದ್ದಾರೆ. “ಪ್ರಧಾನ ತಂಡದಿಂದ ಶ್ರೇಯಸ್ ಅಯ್ಯರ್ ಮತ್ತು ಶಮಿ ಅವರನ್ನು ಕೈಬಿಟ್ಟಿರುವುದು ಆಶ್ಚರ್ಯ ತಂದಿದೆ” ಎಂದು ಅಜರ್ ಟ್ವೀಟ್ ಮಾಡಿದ್ದಾರೆ.

ಮುಂಬರುವ T20 ವಿಶ್ವಕಪ್‌ಗೆ ಹೂಡಾ ಹಾಗೂ ಹರ್ಷಲ್ ಪಟೇಲ್‌ ಸ್ಥಾನದಲ್ಲಿ ಶ್ರೇಯಸ್‌ ಅಯ್ಯರ್‌ ಹಾಗೂ ಶಮಿಯನ್ನು ಆಯ್ಕೆ ಮಾಡಬೇಕಿತ್ತು ಏಂದು ಅಜರುದ್ದೀನ್ ಸಲಹೆ ನೀಡಿದ್ದಾರೆ. ಆದರೆ ಅಜರ್ ಅವರ ಅಭಿಪ್ರಾಯವು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟೀಕೆಗೆ ಒಳಗಾಗಿದೆ. ನೆಟಿಜನ್‌ಗಳು ಅಜರುದ್ದೀನ್‌ ರನ್ನು ಟ್ವಿಟರ್‌ನಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಶಾರ್ಟ್ ಬಾಲ್ ವಿರುದ್ಧ ದೌರ್ಬಲ್ಯ ಹೊಂದಿರುವ ಶ್ರೇಯಸ್‌ ಐಯ್ಯರ್‌  ಆಯ್ಕೆಯಾಗಿದ್ದರೆ ಬೌನ್ಸಿ ಆಸ್ಟ್ರೇಲಿಯನ್ ಟ್ರ್ಯಾಕ್‌ಗಳಲ್ಲಿ ಅವರ ಕೆರಿಯೆರ್‌ ಮುಗಿದುಹೋಗಿರುತ್ತಿತ್ತು ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!