Saturday, October 1, 2022

Latest Posts

ನಮ್ಮೊಂದಿಗೆ ಸ್ನೇಹ ಬೆಳೆಸಿ, ಇಲ್ಲದಿದ್ದರೆ ಕಿಡ್ನಾಪ್ ಮಾಡುವುದಾಗಿ ವಿದ್ಯಾರ್ಥಿನಿಯರಿಗೆ ಪುಂಡರ ಬೆದರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆಯುಧಗಳೊಂದಿಗೆ ಸರ್ಕಾರಿ ಶಾಲೆಗೆ ನುಗ್ಗಿದ ಕೆಲ ಯುವಕರು ವಿದ್ಯಾರ್ಥಿನಿಯರಿಗೆ ಬೆದರಿಕೆ ಹಾಕಿದ್ದಾರೆ. ಅವರೊಂದಿಗೆ ಸ್ನೇಹ ಮಾಡದಿದ್ದರೆ ಅಪಹರಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಘಟನೆ ಜಾರ್ಖಂಡ್‌ನ ರಾಂಚಿಯಲ್ಲಿ ನಡೆದಿದ್ದು, ಪೊಲೀಸ್ ಪ್ರಕರಣ ದಾಖಲಾಗಿದೆ.

ಪೊಲೀಸರ ಪ್ರಕಾರ, ಕೆಲವು ಮುಸ್ಲಿಂ ಯುವಕರು ಸ್ಥಳೀಯ ಸರ್ಕಾರಿ ಶಾಲೆಯ ಒಂಬತ್ತನೇ ತರಗತಿಯ ಬಾಲಕಿಯರಿಗೆ ಬೆದರಿಕೆ ಹಾಕಿದ್ದಾರೆ ಎಂದಿದ್ದಾರೆ. ಶಸ್ತ್ರಾಸ್ತ್ರಗಳನ್ನು ಹಿಡಿದು ಶಾಲೆಗೆ ನುಗ್ಗಿದ ಗೂಂಡಾಗಳು ನಮ್ಮೊಂದಿಗೆ ಸ್ನೇಹ ಬೆಳೆಸದಿದ್ದರೆ ಕಿಡ್ನ್ಯಾಪ್‌ ಮಾಡುವುದಾಗಿ ಹೇಳಿದ್ದಾರೆ. ಪುಂಡರ ಬೆದರಿಕೆ ವೇಳೆ ಶಿಕ್ಷಕರಿದ್ದರೂ ಸಹ ಅವರಿಗೂ ಬೆದರಿಕೆ ಹಾಕಿದ್ದರು. ಸುಮಾರು ಒಂದು ವಾರಗಳ ಕಾಲ ಪ್ರತಿದಿನ ಹೀಗೆ ಶಾಲೆಗೆ ತೆರಳಿ ಬೆದರಿಕೆ ಹಾಕಿದ್ದಾರೆ. ಕೊನೆಗೆ ಬಾಲಕಿಯರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗಾಗಿ ವಿಶೇಷ ತಂಡ ರಚಿಸಿದ್ದಾರೆ. ಆದರೆ ಇದುವರೆಗೂ ಪೊಲೀಸರು ಯಾರೊಬ್ಬರನ್ನು ಬಂಧಿಸಿಲ್ಲ.

ಈ ಶಾಲೆಯಲ್ಲಿ ಹೆಚ್ಚಾಗಿ ಬುಡಕಟ್ಟು ಮತ್ತು ಹಿಂದೂ ಹೆಣ್ಣು ಮಕ್ಕಳು ಓದುತ್ತಿದ್ದಾರೆ. ಆದರೆ ಇದೀಗ ಈ ವಿಚಾರ ಎರಡು ಸಮುದಾಯಗಳ ನಡುವೆ ವಿವಾದವಾಗಿ ಮಾರ್ಪಟ್ಟಿದೆ. ಬೆದರಿಕೆಯ ಹಾಕಿದವರು ಮುಸ್ಲಿಂ ಸಮುದಾಯದವರು ಮತ್ತು ಸಂತ್ರಸ್ತ ವಿದ್ಯಾರ್ಥಿಗಳು ಹಿಂದೂಗಳಾಗಿರುವುದರಿಂದ ಭಯದ ವಾತಾರವರಣ ನಿರ್ಮಾಣವಾಗಿದೆ. ಘಟನೆಗೆ ಜಾತಿ, ಧರ್ಮದ ಬಣ್ಣ ಬಳಿಯುವುದು ಸರಿಯಲ್ಲ, ಯಾರೇ ಆರೋಪಿಗಳಿದ್ದರೂ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!