ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾ ಕಪ್ ಎತ್ತಿಹಿಡಿದ ಶ್ರೀಲಂಕಾ ತಂಡದ ಆಟಗಾರರಿಗೆ ತಾಯ್ನಾಡಿನಲ್ಲಿ ಅಭೂತಪೂರ್ವ ಸ್ವಾಗತ ದೊರೆತಿದೆ. ತೆರೆದ ವಾಹನದಲ್ಲಿ ನಡೆದ ವಿಜಯೋತ್ಸವದ ಮೆರವಣಿಗೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಅಭಿಮಾನಿಗಳು ಆಟಗಾರರ ಯಶಸ್ಸನ್ನು ಶ್ಲಾಘಿಸಿದರು.
ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೆದೆಬಡಿದು ಶ್ರೀಲಂಕಾದ ಯುವಪಡೆ ದಾಖಲೆ ಬರೆಯಿತು.
ಶ್ರೀಲಂಕಾ ಕ್ರಿಕೆಟ್ ಮಂಡಳಿ ಟ್ವಿಟರ್ನಲ್ಲಿ ಆಟಗಾರರ ಮೆರವಣಿಗೆ ನಡೆಸಿದ ಫೋಟೋಗಳನ್ನು ಹಂಚಿಕೊಂಡಿದೆ. ತೆರೆದ ಡಬಲ್ ಡೆಕ್ಕರ್ ಬಸ್ನಲ್ಲಿ ಆಟಗಾರರನ್ನು ಮೆರೆಸಲಾಗಿದೆ.
📸 A grand welcome for the victorious Sri Lanka Team! #AsianChampions
More Images: https://t.co/rXjBuTk3Q6#AsiaCup2022Final #RoaringForGlory pic.twitter.com/EPGnmOZxI5
— Sri Lanka Cricket 🇱🇰 (@OfficialSLC) September 13, 2022
ಅಫ್ಘಾನಿಸ್ತಾನ ವಿರುದ್ಧ ಸೋಲಿನೊಂದಿಗೆ ಏಷ್ಯಾ ಕಪ್ ಅಭಿಯಾನ ಆರಂಭಿಸಿದ್ದ ಶ್ರೀಲಂಕಾ ಟ್ರೋಫಿ ಗೆಲ್ಲುತ್ತದೆ ಎಂಬ ಯಾವ ನಿರೀಕ್ಷೆಯೂ ಇರಲಿಲ್ಲ. ಆರ್ಥಿಕ ಸಂಕಷ್ಟದಿಂದ ನಲುಗಿರುವ ರಾಷ್ಟ್ರದ ಆಟಗಾರರು ಟ್ರೋಫಿಗೆಲ್ಲುವ ಕನಸು ಯಾರು ಕಂಡಿರಲಿಲ್ಲ. ಆದರೆ ಯಾವ ಉಡಾಫೆಗಳಿಗೆ ಗಮನಕೊಡದೆ ಶ್ರೀಲಂಕಾ ಯುವಪಡೆ ವಿಶ್ವ ಕ್ರಿಕೆಟ್ ಅಚ್ಚರಿಪಡುವ ರೀತಿ ಪ್ರದರ್ಶನ ನೀಡಿತು.
ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿರುವ ದೇಶಕ್ಕೆ ಆಟಗಾರರ ಟ್ರೋಫಿಯನ್ನು ಅರ್ಪಿಸಿದ್ದಾರೆ. ಇದು ತಂಡಕ್ಕೆ ದೇಶದ ಮೇಲಿರುವ ಕಾಳಜಿ, ಪ್ರೀತಿಯನ್ನು ತೋರಿಸುತ್ತದೆ.