Monday, September 26, 2022

Latest Posts

ತಾಯ್ನಾಡಿನಲ್ಲಿ ಏಷ್ಯಾ ಕಪ್​ ದೊರೆಗಳ ಅದ್ಧೂರಿ ಮೆರವಣಿಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯಾ ಕಪ್​ ಎತ್ತಿಹಿಡಿದ ಶ್ರೀಲಂಕಾ ತಂಡದ ಆಟಗಾರರಿಗೆ ತಾಯ್ನಾಡಿನಲ್ಲಿ ಅಭೂತಪೂರ್ವ ಸ್ವಾಗತ ದೊರೆತಿದೆ. ತೆರೆದ ವಾಹನದಲ್ಲಿ ನಡೆದ ವಿಜಯೋತ್ಸವದ ಮೆರವಣಿಗೆಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಅಭಿಮಾನಿಗಳು ಆಟಗಾರರ ಯಶಸ್ಸನ್ನು ಶ್ಲಾಘಿಸಿದರು.

ಫೈನಲ್​ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೆದೆಬಡಿದು ಶ್ರೀಲಂಕಾದ ಯುವಪಡೆ ದಾಖಲೆ ಬರೆಯಿತು.
ಶ್ರೀಲಂಕಾ ಕ್ರಿಕೆಟ್​ ಮಂಡಳಿ ಟ್ವಿಟರ್​ನಲ್ಲಿ ಆಟಗಾರರ ಮೆರವಣಿಗೆ ನಡೆಸಿದ ಫೋಟೋಗಳನ್ನು ಹಂಚಿಕೊಂಡಿದೆ. ತೆರೆದ ಡಬಲ್ ಡೆಕ್ಕರ್ ಬಸ್‌ನಲ್ಲಿ ಆಟಗಾರರನ್ನು ಮೆರೆಸಲಾಗಿದೆ.

ಅಫ್ಘಾನಿಸ್ತಾನ ವಿರುದ್ಧ ಸೋಲಿನೊಂದಿಗೆ ಏಷ್ಯಾ ಕಪ್​ ಅಭಿಯಾನ ಆರಂಭಿಸಿದ್ದ ಶ್ರೀಲಂಕಾ ಟ್ರೋಫಿ ಗೆಲ್ಲುತ್ತದೆ ಎಂಬ ಯಾವ ನಿರೀಕ್ಷೆಯೂ ಇರಲಿಲ್ಲ. ಆರ್ಥಿಕ ಸಂಕಷ್ಟದಿಂದ ನಲುಗಿರುವ ರಾಷ್ಟ್ರದ ಆಟಗಾರರು ಟ್ರೋಫಿಗೆಲ್ಲುವ ಕನಸು ಯಾರು ಕಂಡಿರಲಿಲ್ಲ. ಆದರೆ ಯಾವ ಉಡಾಫೆಗಳಿಗೆ ಗಮನಕೊಡದೆ ಶ್ರೀಲಂಕಾ ಯುವಪಡೆ ವಿಶ್ವ ಕ್ರಿಕೆಟ್​ ಅಚ್ಚರಿಪಡುವ ರೀತಿ ಪ್ರದರ್ಶನ ನೀಡಿತು.

ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿರುವ ದೇಶಕ್ಕೆ ಆಟಗಾರರ ಟ್ರೋಫಿಯನ್ನು ಅರ್ಪಿಸಿದ್ದಾರೆ. ಇದು ತಂಡಕ್ಕೆ ದೇಶದ ಮೇಲಿರುವ ಕಾಳಜಿ, ಪ್ರೀತಿಯನ್ನು ತೋರಿಸುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!