ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ರಿಟನ್ ರಾಣಿ ಎಲಿಜಬೆತ್ ಅಂತಿಮ ದರ್ಶನ ಪಡೆಯಲು ಬರೋಬ್ಬರಿ ಎರಡೂವರೆ ಲಕ್ಷ ಮಂದಿ ಸಾಲಿನಲ್ಲಿ ನಿಂತಿದ್ದರು ಎನ್ನಲಾಗಿದೆ.
ಅಂತ್ಯಕ್ರಿಯೆಗೂ ಮುನ್ನ ಜನರ ಅಂತಿಮ ದರ್ಶನಕ್ಕಾಗಿ ವೆಸ್ಟ್ ಮಿನಿಸ್ಟರ್ ಹಾಲ್‌ನಲ್ಲಿ ನಾಲ್ಕು ದಿನಗಳ ಕಾಲ ರಾಣಿಯ ಶವಪೆಟ್ಟಿಗೆಯನ್ನು ಇರಿಸಲಾಗಿತ್ತು. ಈ ವೇಳೆ ಚಳಿಯನ್ನೂ ಲೆಕ್ಕಿಸದೆ ಎರಡೂವರೆ ಲಕ್ಷ ಮಂದಿ ರಾಣಿಯನ್ನು ಕಡೇ ಬಾರಿ ನೋಡಲು ಕಾದು ನಿಂತಿದ್ದರು.
ಕನಿಷ್ಠ 13 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ಜನ ನಿಂತಿದ್ದು, ಥೇಮ್ಸ್ ನದಿಯುದ್ದಕ್ಕೂ ಜನರು ಕಾಣಿಸುತ್ತಿದ್ದರು. ಲಂಡನ್‌ನ ಆರೋಗ್ಯ ಸಿಬ್ಬಂದಿ ಹಾಗೂ ಸ್ವಯಂ ಸೇವಕರು ಎರಡು ಸಾವಿರ ಸಂಖ್ಯೆಯಲ್ಲಿದ್ದು, ಜನರನ್ನು ನೋಡಿಕೊಳ್ಳಲಾಗಿದೆ.